

ನಗರ್ಲೆ: ನಂಜನಗೂಡು ತಾಲೂಕು ನಗರ್ಲೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಎ.ಬಿ.ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮೈಸೂರು ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಬಿ.ಎನ್.ಸದಾನಂದ ಮಾತನಾಡಿ, ನಮ್ಮ ಸಂಘವು ತಾಲೂಕಿನಲ್ಲೇ ಮಾದರಿ ಸಂಘವಾಗುತ್ತ ಲಾಭದಲ್ಲಿ ನಡೆಯುತ್ತಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಸಹಕಾರ ಸಂಘದ ವತಿಯಿಂದ ನೀಡುವ ಸಾಲ ಸೌಲಭ್ಯಗಳನ್ನು ಸರಿಯಾದ ಸಮಯದಲ್ಲಿ ಬಳಸಿಕೊಂಡು ಆರ್ಥಿಕಾಭಿವೃದ್ಧಿಯನ್ನು ಸಾಧಿಸುವುದರ ಜತೆಗೆ ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಸಂಘದ ಅಧ್ಯಕ್ಷ ಎ.ಬಿ.ಪುಟ್ಟಸ್ವಾಮಿ ಮಾತನಾಡಿ, ಸದಸ್ಯರು ಸಂಘದಿಂದ ನೀಡುವ ಸಾಲ ಸೌಲಭ್ಯಗಳನ್ನು ಸೂಕ್ತ ಸಮಯದಲ್ಲಿ ಬಳಸಿಕೊಂಡು ಅಭಿವೃದ್ಧಿ ಸಾಧಿಸುವುದರ ಜತೆಗೆ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಎಲ್.ನಾಗೇಶ್, ನಿರ್ದೇಶಕರಾದ ಚಿನ್ನಸ್ವಾಮಿ, ಎ.ಎಸ್.ಸತೀಶ್, ಎಚ್.ಕೆ.ಧನಲಕ್ಷ್ಮೀ, ಎಚ್.ಎಸ್.ಮರಿನಂಜಪ್ಪ, ಎಚ್.ಬಿ.ಸಿದ್ದರಾಜು, ಕೆ.ಎನ್.ಶಿವಸ್ವಾಮಿ, ಬಿ.ಪಿ.ಮಲ್ಲೇಶ್, ಅನಸೂಯ, ಸಂಘದ ಕಾರ್ಯದರ್ಶಿ ಎನ್.ಬಿ.ಮಹೇಂದ್ರ, ಸಿಬ್ಬಂದಿ ಸೇರಿದಂತೆ ಸದಸ್ಯರು ಹಾಜರಿದ್ದರು.