

ಮುಳಗುಂದ: ಆಧುನಿಕ ಯುಗದಲ್ಲಿ ಆಹಾರ ಪದ್ಧತಿಯ ಬದಲಾವಣೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಮಾರಕ ರೋಗಗಳು ಬಾಧಿಸುತ್ತಿವೆ. ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಕೆ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಿ ಎಂದು ಆಹಾರ ತಜ್ಞ ಡಾ. ಖಾದರ ಸಲಹೆ ನೀಡಿದರು.
ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಮಠದ ಸಭಾಭವನದಲ್ಲಿ ಅಂತಾರಾಷ್ಟಿçÃಯ ಸಿರಿಧಾನ್ಯಗಳ ವರ್ಷ-೨೦೨೩ ಐಸಿಎಆರ್ ಕೆ.ಎಚ್. ಪಾಟೀಲ ಹುಲಕೋಟಿ ಹಾಗೂ ಕೃಷಿ ಇಲಾಖೆ ಗದಗ ಸಹಯೋಗದಲ್ಲಿ ಜರುಗಿದ ಸಿರಿಧಾನ್ಯಗಳ ಮಾತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಗ ಬಂದ ಮೇಲೆ ಆಹಾರ ಪದ್ಧತಿಯನ್ನು ಬದಲಾವಣೆ ಮಾಡುವ ಬದಲು ರೋಗ ಬರುವುದಕ್ಕೆ ಮೊದಲೇ ಆಹಾರ ಪದ್ಧತಿಯನ್ನು ಬದಲಾಯಿಸಿ. ಅಕ್ಕಿ, ಗೋಧಿ, ಸಕ್ಕರೆಯಿಂದ ರೋಗಗಳು ಬರುತ್ತಿವೆ.
ಪ್ಲಾಸ್ಟಿಕ್ ಕಣಗಳು ದೇಹವನ್ನು ಸೇರಿ ಲವಣಾಂಶಗಳು ಜೀವಸತ್ವಗಳನ್ನು ಹೀರುವ ಶಕ್ತಿಯನ್ನು ನಾಶಪಡಿಸಿ ಡಯಾಬಿಟಿಸ್, ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬಾಧಿಸುತ್ತಿವೆ.
ನಾವು ಸೇವಿಸುವ ಊಟದಲ್ಲಿ ನಾರಿನಂಶ ಇಲ್ಲ. ದೇಹದ ನರನಾಡಿಗಳು ಸತ್ವಗಳನ್ನು ಕಳೆದುಕೊಳ್ಳುತ್ತಿವೆ. ೮೦ ವರ್ಷದ ಹಿಂದೆ ಈ ಪದ್ಧತಿ ಇರಲಿಲ್ಲ. ಪೂರ್ವಜರು ನವಣೆ, ಸಾಮೆ, ಸಜ್ಜೆ , ಕೊರಲ, ಹಾರಕ, ಕೊಬ್ಬರಿಯಂತಹ ಸಿರಿಧಾನ್ಯಗಳನ್ನು ಸೇವಿಸುತ್ತಿದ್ದರು ಎಂದು ತಿಳಿಸಿದರು.
ಕೆಮ್ಮಿದರು, ಸೀನಿದರು ಸ್ಕಾÈನ್ ಮಾಡಿಸುವಂತಹ ದಿನಗಳು ಬಂದಿವೆ. ಆಹಾರ ಪದ್ಧತಿ ಬದಲಾವಣೆಯಾಗದಿದ್ದರೆ ಯಾವ ರೋಗವು ವಾಸಿಯಾಗುವುದಿಲ್ಲ. ಹಿಂದಿನ ಪದ್ಧತಿ, ಜೀವನ ಶೈಲಿ ಮರೆಯಾಗಿದೆ. ವಿಷವರ್ತುಲದಿಂದ ಹೊರಬರಬೇಕಿದೆ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಮನುಷ್ಯನ ಆಹಾರ ಪದ್ಧತಿ, ಜೀವನ ಶೈಲಿಯಿಂದ ಔಷಧವನ್ನೇ ಆಹಾರದ ರೀತಿಯಲ್ಲಿ ಸೇವಿಸುವಂತಹ ಪರಿಸ್ಥಿತಿ ಬಂದಿದೆ ಎಂದರು.
ಜೆ.ಕೆ. ಜಮಾದರ, ಎಂ.ಡಿ. ಬಟ್ಟೂರ, ಎಸ್.ಎಂ. ನೀಲಗುಂದ, ಮಾಜಿ ತಾಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಮಂಗಳಾ ನೀಲಗುಂದ, ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ, ಜಿಲ್ಲಾ ಕೃಷಿ ನಿರ್ದೇಶಕಿ ತಾರಾಮಣಿ, ಡಿಡಿಎ ಕರಿಯಲ್ಲಪ್ಪ ನಾಗನಗೌಡ್ರ, ಗದಗ ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರಣ್ಣವರ, ರವಿ ಪಿ.ಎಫ್.ಸಿ.ಗುರಿಕಾರ ಇತರರಿದ್ದರು.