

ಚಿತ್ರದುರ್ಗ: ಬೈಕ್‌ಗಳನ್ನು ಶೋಕಿಗೆ ಬಳಸದೆ ಸ್ವಯಂ ಉದ್ಯೋಗಕ್ಕೆ ಸದ್ಬಳಕೆ ಮಾಡಿಕೊಂಡರೆ ಆರ್ಥಿಕಾಭಿವೃದ್ಧಿಯೊಂದಿಗೆ ಸರ್ಕಾರದ ಯೋಜನೆಗ ಳು ಫಲಪ್ರದವಾಗುತ್ತವೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ,ಆದಿಜಾಂಬವ ಅಭಿವೃದ್ಧಿ ನಿ ಗಮ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ,ಭೋವಿ ಅಭಿವೃದ್ಧಿ ನಿಗಮ ಹಾಗೂ ತಾಂಡ ಅಭಿವೃದ್ಧಿ ನಿಗಮಗಳಿಂದ ಮಂಜೂರಾಗಿದ್ದ ಬೈಕ್‌ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
ನಿರುದ್ಯೋಗಿ ಯುವ ಜನರ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗಲೆಂದು ಮೋಟಾರ್ ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತಿದೆ. ತ ಮ್ಮ ಕ್ಷೇತ್ರದಲ್ಲಿ ವಾಲ್ಮೀಕಿ ನಿಗಮದಿಂದ-20,ಅಂಬೇಡ್ಕರ್ ನಿಗಮ-20,ಆದಿಜಾಂಬವ ನಿಗಮ-20,ತಾಂಡ ನಿಗಮ 10,ಭೋವಿ ನಿಗಮ ದ 10 ಸೇರಿ 80 ಫಲಾನುಭವಿಗಳಿಗೆ 56 ಲಕ್ಷ ರೂ.ವೆಚ್ಚದಲ್ಲಿ ಬೈಕ್‌ಗಳನ್ನು ನೀಡಲಾಗಿದೆ. ಪ್ರತಿ ವಾಹನಕ್ಕೆ ನಿಗದಿ ಪಡಿಸಿರುವ 70 ಸಾವಿರ ರೂ.ಗಳಲ್ಲಿ 50 ಸಾವಿರ ರೂ.ಸಬ್ಸಿಡಿ ಹಾಗೂ 20 ಸಾವಿರ ರೂ.ಬ್ಯಾಂಕ್ ಸಾಲವನ್ನು ಒದಗಿಸಲಾಗಿದೆ ಎಂದರು.
ಬಟ್ಟೆ,ಮೀನು,ತರಕಾರಿ ಇತ್ಯಾದಿ ಸರಕು ಹಾಗೂ ಆನ್‌ಲೈನ್ ಮಾರ್ಕೆಟಿಂಗ್ ಸರಕುಗಳ ಸರಬರಾಜು,ಖಾಸಗಿ ಕಂಪನಿಗಳ ಉದ್ಯೋ ಗಕ್ಕೆ ವಾಹನಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ವಾಹನ ಇಲ್ಲವೆಂಬ ಕಾರಣಕ್ಕೆ ಅನೇಕ ಸಂಸ್ಥೆಗಳು ಯುವಕರಿಗೆ ಉದ್ಯೋಗ ನಿ ರಾಕರಿಸಿರುವ ಉದಾರಣೆಗಳಿವೆ.
ಹಣಕಾಸು ತೊಂದರೆಯಿಂದಾಗಿ ಅನೇಕರಿಗೆ ಬೈಕ್ ಖರೀದಿ ಸಾಧ್ಯವಾಗಿರುವುದಿಲ್ಲವೆಂದ ಶಾಸಕರು,ಚಾಲನಾ ಪರವಾನಗಿಯೊಂದಿಗೆ ಹೆಲ್ಮೆಟ್ ಧರಿಸಿ ಬೈಕ್ ಓಡಿಸಬೇಕೆಂದರು. ವಿವಿಧ ನಿಗಮಗಳ ಅಧಿಕಾರಿಗಳಾದ ಮಹೇಶ್,ತಿರುಮಲೇಶ್,ಮುರುಳಿ,ನಗರದ ಶ್ರೀ ಅ ಹೋಬಲ ಟಿವಿಎಸ್ ಶೋರೂಂ.ಮಾಲೀಕ ಅರುಣ್ ಇತರರು ಇದ್ದರು.