

ರಾಯಚೂರು: ಆಡಳಿತ ಪಕ್ಷ ಇವಿಎಂಗಳನ್ನು ತಿರುಚಬಹುದು ಎಂಬುವುದನ್ನು ತಾಂತ್ರಿಕ ತಜ್ಞರು ಸಾಬೀತು ಪಡಿಸಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಇವಿಎಂ ಬಳಕೆಯನ್ನು ಕೈಬಿಟ್ಟು ಮತ ಪತ್ರಗಳನ್ನು ಬಳಕೆ ಮಾಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್‌ನಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಆಡಳಿತ ಪಕ್ಷಗಳು ತಮಗೆ ಬೇಕಾದಂತೆ ಇವಿಎಂಗಳನ್ನು ತಿರುಚುವ ಕೆಲಸ ಮಾಡುತ್ತಿವೆ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಸಮೀಕ್ಷೆಯಲ್ಲಿ ವಿಲರಾದ ಅನೇಕ ಅಭ್ಯರ್ಥಿಗಳು ಚುನಾವಣೆಯಲ್ಲಿ ಇವಿಎಂ ತಿರುಚಿ ಗೆಲ್ಲುವಂತೆ ಮಾಡಲಾಗಿದೆ.
ವಿವಿಧ ರಾಜ್ಯದಲ್ಲಿ ಹಲವು ಪಕ್ಷಗಳು ಇವಿಎಂಗಳ ಮೇಲೆ ಆರೋಪವನ್ನು ಮಾಡಿದ್ದವು. ಆದರೆ ಚುನಾವಣೆ ಆಯೋಗ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆರೋಪಗಳನ್ನು ತಳ್ಳಿ ಹಾಕುವ ನಿಟ್ಟಿನಲ್ಲಿ ಸಮರ್ಪಕ ಉತ್ತರವನ್ನು ನೀಡುತ್ತಿಲ್ಲ. ಇದರಿಂದ ಚುನಾವಣೆ ಆಯೋಗದ ಮೇಲೆ ಅನುಮಾನಗಳು ಹುಟ್ಟುವಂತೆ ಮಾಡಿದೆ.
ಜನರು ಮತದಾನದ ನಂತರ ಅವರು ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ ಎಂಬುದನ್ನು ಸೂಚಿಸಲು ಸ್ವೀಕೃತಿ ಚೀಟಿಯನ್ನು ಸ್ವೀಕರಿಸಬೇಕು. ಸ್ವೀಕೃತಿ ಚೀಟಿಗಳ ಆಧಾರದ ಮೇಲೆ ಮತಗಳನ್ನು ಎಣಿಸಬೇಕು. ಮೊದಲಿನಂತೆ ಮತಪತ್ರದ ಮೂಲಕ ಪಾರದರ್ಶನ ಚುನಾವಣೆ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜಿ.ಅಮರೇಶ, ಪದಾಕಾರಿಗಳಾದ ಅಜೀಜ್ ಜಾಗೀರದಾರ್, ಮಲ್ಲಯ್ಯ ಕಟ್ಟಿಮನಿ, ನಿರಂಜನಕುಮಾರ್, ಆನಂದಕುಮಾರ, ಲಕ್ಷ್ಮಣ, ಡಿಎಸ್‌ಎಸ್ ಸಂಚಾಲಕ ಶರಣಪ್ಪ ದಿನ್ನಿ ಪಾಲ್ಗೊಂಡಿದ್ದರು.