ಡಿಎಪಿಗೆ ಪರ್ಯಾಯ ಗೊಬ್ಬರ ಬಳಸಿ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ವಿವಿಧ ಜಿಲ್ಲೆಗಳ ಒಟ್ಟಾರೆ ಮಣ್ಣು ಪರೀೆಗಳ ಸಮೀೆ ವರದಿ ಪ್ರಕಾರ ಒಟ್ಟು ಮಣ್ಣು ಮಾದರಿಗಳ ಪೈಕಿ ಶೇ. 46ರಷ್ಟು ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣ, ಶೇ. 52ರಷ್ಟು ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣ ಮತ್ತು ಶೇ. 2ರಷ್ಟು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ರಂಜಕದ ಅಂಶ ಇರುವುದು ಕಂಡು ಬಂದಿದೆ. ಈ ಅಂಕಿ ಅಂಶವು ಜಿಲ್ಲೆಯನ್ನು ಸಹ ಒಳಗೊಂಡಿದೆ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಕೃಷಿ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ಕೃಷಿ ಜಮೀನುಗಳಿಗೆ ಒದಗಿಸುವ ರಂಜಕವು ಸಾರಜನಕ ಪೂರೈಸುವ ಗೊಬ್ಬರಗಳಿಗೆ ಹೋಲಿಸಿದರೆ ಯೂರಿಯಾ ಬಹಳ ದಿನಗಳ ಸಮಯ ಮಣ್ಣಿನಲ್ಲಿ ಸ್ಥಿರವಾಗಿ ಉಳಿಯುತ್ತದೆ. ಬೆಳೆಗಳಿಗೆ ಸಾವಕಾಶವಾಗಿ ಪೂರೈಕೆಯಾಗುತ್ತದೆ. ಬೆಳೆ ಪದ್ಧತಿ ಮತ್ತು ವಾಷಿರ್ಕ ಬದಲಿ ಬೆಳೆ ಪದ್ಧತಿಗಳಲ್ಲಿ ಭೂಮಿಯಲ್ಲಿ ಇರುವ ರಂಜಕ ಒದಗಿಸಿದ ಬೆಳೆಗೆ ಇದು ಸಂರ್ಪೂಣವಾಗಿ ಲಭ್ಯವಾಗದಿದ್ದರೂ ತದನಂತರದ ಬೆಳೆಗೂ ಲಭ್ಯವಾಗುತ್ತದೆ.
ರಂಜಕ ಒದಗಿಸುವ ಗೊಬ್ಬರಗಳಲ್ಲಿ ಅತಿಯಾಗಿ ಬಳಕೆಯಾಗುವ ಗೊಬ್ಬರ ಡಿಎಪಿ. ಇದರಲ್ಲಿ ಪೋಷಕಾಂಶ ಪ್ರಮಾಣ ಶೇ. 18ರಷ್ಟು ಸಾರಜನಕ ಮತ್ತು ಶೇ. 46ರಷ್ಟು ರಂಜಕ ಇದೆ. ಇದೇ ಕಾರಣಕ್ಕೆ ಮತ್ತು ಬೆಳೆಗೆ ಪೂರೈಕೆ ಮಾಡುವಲ್ಲಿ ಸುಲಭವಾಗಿ ಕೂರಿಗೆಯಲ್ಲಿ ಬೀಳುವುದರಿಂದ ಡಿಎಪಿ ರಸಗೊಬ್ಬರಕ್ಕೆ ಅತಿ ಹೆಚ್ಚಿನ ಬೇಡಿಕೆ ಇದೆ.
ಸಾರಜನಕ ಮತ್ತು ಪೊಟ್ಯಾಷ್​ ಪೋಷಕಾಂಶಗಳ ಜತೆ ಸಂಯುಕ್ತ ಹೊಂದಿದ ಸಂಯುಕ್ತ ಅಥವಾ ಮಿಶ್ರಣ ರೂಪದಲ್ಲಿ ಲಭ್ಯವಿರುವ ಗೊಬ್ಬರಗಳಾದ ಸೂಪರ್​ ಾಸ್ಪೆಟ್​ 17:17:17, 15:15:15, 19:19:19, 10:26:26. 20:20:00, 28:28:00 ಮತ್ತು ಎಣ್ಣೆಕಾಳು ಮತ್ತು ದ್ವಿದಳ ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ಸಂಯೋಜಿಸಿದ 12:32:16 ರಾಸಾಯನಿಕ ರಸಗೊಬ್ಬರ ಜತೆಗೆ ನೀರಿನಲ್ಲಿ ಸಂರ್ಪೂಣ ಕರಗುವ ಮೊನೋ ಅಮೋನಿಯಂ ಾಸ್ಪೆಟ್​ 12:61:00 ಮತ್ತು ಮೊನೋ ಪೊಟ್ಯಾಸಿಯಂ ಾಸ್ಪೆಟ್​ 00:52:34 ಸಹ ಲಭ್ಯವಿದೆ. ಈ ಗೊಬ್ಬರಗಳನ್ನು ಬೆಳೆಯ ಬೆಳವಣಿಗೆ ಹಂತದಲ್ಲಿ ಬಳಸಬಹುದು.
ಆಮ್ಲಿಯ ಮಣ್ಣುಗಳಲ್ಲಿ ನೈಸಗಿರ್ಕವಾಗಿ ದೊರೆಯುವ ಶಿಲಾ ರಂಜಕವನ್ನು ವಿಶೇಷವಾಗಿ ಬಹುವಾಷಿರ್ಕ ಬೆಳೆಗಳಲ್ಲಿ ಮತ್ತು ಭತ್ತದಲ್ಲಿ ಬಳಸಬಹುದು. ಧಾರವಾಡ ಜಿಲ್ಲೆಯಲ್ಲಿನ ಪ್ರಾಥಮಿಕ ಪತ್ತಿನ ಸಹಕಾರ ಸಂಗಳಲ್ಲಿ ಪ್ರಸ್ತುತ 20:20:00, 10:26:26, 12:32:16 ಮತ್ತು 15:15:15 ಲಭ್ಯ ಇವೆ. ರಂಜಕಯುಕ್ತ ರಸಗೊಬ್ಬರಕ್ಕೆ ಪರ್ಯಾಯವಾಗಿದ್ದು, ರೈತರು ಡಿಎಪಿಯೇ ಬೇಕೆಂದು ಬಯಸದೆ ಉಳಿದ ಗೊಬ್ಬರಗಳನ್ನೂ ಬಳಸಬಹುದು. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಕಚೇರಿ ಸಂಪಕಿರ್ಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net