

ಲಿಂಗಸುಗೂರು: ನಮ್ಮ ಸುತ್ತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಟಿಎಚ್‌ಒ ಡಾ.ಅಮರೇಶ ಪಾಟೀಲ್ ಹೇಳಿದರು.
ಇದನ್ನೂ ಓದಿ: ಮಕ್ಕಳು ಡೆಂೆ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸಲಿ
ಅಡವಿಭಾವಿಯಲ್ಲಿ ಆರೋಗ್ಯ ಇಲಾಖೆ, ಆಶಾ, ಗ್ರಾಪಂ ಮತ್ತು ಶಾಲಾ ಶಿಕ್ಷಕರ ಸಹಯೋಗದಲ್ಲಿ ಡೆಂೆ ನಿಯಂತ್ರಣ ಮತ್ತು ಸ್ವಚ್ಛತೆ ಕುರಿತು ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ಹೇಳಿದರು.
ಶುದ್ಧ ಮತ್ತು ನಿಂತ ನೀರಿನಲ್ಲಿ ಲಾರ್ವಾ ಬೆಳೆವಣಿಗೆ ಆಗುವುದರಿಂದ ವಾರದಲ್ಲಿ ಎರಡು ಬಾರಿ ತೊಟ್ಟಿಗಳನ್ನು ಸ್ವಚ್ಛಗೊಳಿಸಬೇಕು. ಸೊಳ್ಳೆಗಳ ಉತ್ಪತ್ತಿ ಸ್ಥಳಗಳಾದ ತಿಪ್ಪೆಗುಂಡಿ ಸ್ಥಳಾಂತರ, ಕಲುಷಿತ ನೀರು ನಿಲ್ಲದಂತೆ ಸೊಳ್ಳೆ ಪರದೆ ಬಳಸಬೇಕು. ಜ್ವರ ಕಾಣಿಸಿಕೊಂಡರೆ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.