

ರಾಯಚೂರು: ಮಹಿಳೆಯರು ಋತುಮತಿಯಾದಾಗ ಬಟ್ಟೆ, ಸ್ಯಾನಿಟರಿ ಪ್ಯಾಡ್ ಬಳಸುವುದನ್ನು ಕೈಬಿಟ್ಟು ಸುರಕ್ಷಿತ ಕ್ರಮವಾದ ಮುಟ್ಟಿನ ಕಪ್ ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಹೇಳಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ಥಿಂಕಲ್ ನವೀನ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿ, ಕಪ್ ಬಳಸುವುದರಿಂದ ಮಹಿಳೆಯರು ಆತ್ಮವಿಶ್ವಾಸದಿಂದ ಇರಬಹುದಾಗಿದೆ ಎಂದರು.
ಮಹಿಳೆಯರ ಮುಟ್ಟಿನ ಚಕ್ರ 28 ದಿನಗಳಲ್ಲಿ ಹಾಗೂ ತಿಂಗಳಲ್ಲಿ ಐದು ದಿನಗಳ ಕಾಲ ರಕ್ತಸ್ರಾವ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಕಡಿಮೆ ಎಂದರೂ ದಿನಕ್ಕೆ ಮೂರು ಪ್ಯಾಡ್ ಉಪಯೋಗಿಸುವುದರಿಂದ ಜೀವಿತಾವಯಲ್ಲಿ 10 ರಿಂದ 12 ಸಾವಿರ ಪ್ಯಾಡ್ ಬಳಕೆ ಮಾಡುತ್ತಾರೆ.
ಮಹಿಳಾ ಪೊಲೀಸ್ ಸಿಬ್ಬಂದಿಗಳ ಕೆಲಸಕ್ಕೆ ನಿಗದಿತ ಸಮಯ ಇರುವುದರಿಂದ ಜತೆಗೆ ಸಮರ್ಪಕ ಶೌಚಾಲಯದ ಕೊರತೆಯಿರುತ್ತದೆ. ಇದರಿಂದ ಮುಟ್ಟಿನ ಸಂದರ್ಭದಲ್ಲಿ ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಕಪ್ ಬಳಕೆ ಮಾಡುವುದರಿಂದ ತೊಂದರೆಯಾಗುವುದಿಲ್ಲ.
ಕಡಿಮೆ ಘನತ್ಯಾಜ್ಯ ಉತ್ಪಾದನೆ, ಸಾರ್ವಜನಿಕ ಆರೋಗ್ಯದ ಅಪಾಯ ಕಡಿಮೆ ಮಾಡುವುದು. ಸುಧಾರಿತ ಆರೋಗ್ಯ, ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಮುಟ್ಟಿನ ಕಪ್ ವಿತರಿಸಲಾಗುತ್ತಿದ್ದು ಎಂದು ರಾಹುಲ್ ತುಕಾರಾಮ್ ಪಾಂಡ್ವೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಕಾರಿ ಸಾಹಿತ್ಯ ಆಲದಕಟ್ಟೆ, ಜಿ.ಪಂ. ಯೋಜನಾ ನಿರ್ದೇಶಕ ವಿ.ಪ್ರಕಾಶ, ಜಿಲ್ಲಾ ಆರ್‌ಸಿಎಚ್ ಅಕಾರಿ ಡಾ.ನಂದಿತಾ, ವೈದ್ಯೆ ಡಾ.ಶ್ರೀಲತಾ, ಎಚ್‌ಎಲ್‌ಎಸ್ ಲ್ೈ ಕೇರ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ಮನೋಜ, ಸಹ ವ್ಯವಸ್ಥಾಪಕ ಸಂದೀಪ್ ಚೌವಾಣ್ ಉಪಸ್ಥಿತರಿದ್ದರು.