ಫೆ.8ರಂದು ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಳಕ್ಕೆ ಹಸಿರು ಹೊರೆಕಾಣಿಕೆ

mng--6 Feb Urva ganapathi
Published on

ಮಂಗಳೂರು: ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ಫೆ.11ರಿಂದ 18ರ ತನಕ ನಡೆಯಲಿದ್ದು, ಈ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಮೆರವಣಿಗೆ ಫೆ.8ರಂದು ಸಂಜೆ 3 ಗಂಟೆಗೆ ಮಣ್ಣಗುಡ್ಡೆ ಗುರ್ಜಿ ವೃತ್ತದ ಬಳಿಯಿಂದ ಹೊರಡಲಿದೆ.
ೆ.11ರಂದು ಬೆಳಗ್ಗೆ 8ರಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಅಥರ್ವ ಶೀರ್ಷ ಮಹಾಗಣಪತಿಯಾಗ ಧಾರಾಂತ ಬಿಂಬ ಶುದ್ಧಿ, ರಾತ್ರಿ ವಾಸ್ತು ಪೂಜೆ ಪ್ರಕ್ರಿಯೆ ನಡೆಯಲಿದೆ.


ೆ.12ರಂದು ಸಂಜೀವಿನಿ ಮಹಾಮೃತ್ಯುಂಜಯ ಯಾಗ, ಮಹಾಗಣಪತಿ, ದುರ್ಗಾನವಗ್ರಹ ಸನ್ನಿಧಿಯಲ್ಲಿ ಅಷ್ಟಬಂಧ ಪ್ರತಿಷ್ಠೆ, ೆ.13ರಂದು ಬೆಳಗ್ಗೆ 8 ರಿಂದ ಪೂರ್ಣಮಾನ ನವಗ್ರಹ ಹೋಮ, ಮಧ್ಯಾಹ್ನ 12ಕ್ಕೆ ವಾರ್ಷಿಕ ಜಾತ್ರೆಯ ಧ್ವಜಾರೋಹಣ, ಸಂಜೆ 5ರಿಂದ ಶ್ರೀ ಚಕ್ರಪೂಜೆ ನಡೆಯಲಿದೆ.


ೆ.14ರಂದು ಬೆಳಗ್ಗೆ 8ರಿಂದ ನಾಗದೇವರ ಸನ್ನಿಧಿಯಲ್ಲಿ ಪವಮಾನ ಹೋಮಗಳು, ಸಾನಿಧ್ಯ ಕಲಶಾಭಿಷೇಕ, ಮಹಾಪೂಜಾ, ಬ್ರಹ್ಮಕಲಶ ಮಂಡಲ ಪೂಜೆ. ಸಂಜೆ 5 ರಿಂದ ಪಂಚವಿಂಶತಿ ದ್ರವ್ಯಮೀಳಿತ 1001 ಕಲಶ ಪ್ರತಿಷ್ಠೆ, ದುರ್ಗಾದೇವಿಗೆ 109ಕಲಶಾಧಿವಾಸ ನಡೆಯಲಿದೆ.


ೆ.17ರಂದು ಬೆಳಗ್ಗೆ 9ರಿಂದ ತುಲಾಭಾರ ಸೇವೆಗಳು, ಪಲ್ಲಪೂಜೆ, ಮಹಾನ್ನಸಂತರ್ಪಣೆ, ಜಲಕದ ಬಲಿ, ರಥಾರೋಹಣ, ರಾತ್ರಿ ಬ್ರಹ್ಮರಥೋತ್ಸವ, ಕಲ್ಬಾವಿ ನಾಗಬ್ರಹ್ಮಸ್ಥಾನದ ಕೆರೆಯಲ್ಲಿ ಅವಭೃತ ಸ್ನಾನ.
ೆ. 18ರಂದು 25 ಸಂಪ್ರೋಕ್ಷಣಾ ಕಲಶ, ಸಂಜೆ 5.45ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ನಡೆಯಲಿದೆ. ರಾತ್ರಿ 8ಕ್ಕೆ ಪ್ರಸನ್ನ ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

15ರಂದು ಬ್ರಹ್ಮಕಲಶಾಭಿಷೇಕ
ೆ.15ರಂದು ಬೆಳಗ್ಗೆ 6ರಿಂದ ಬ್ರಹ್ಮಕಲಶಾಭಿಷೇಕ ಆರಂಭ, 9.05ಕ್ಕೆ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ಶ್ರೀ ದುರ್ಗಾದೇವಿಗೆ ಬ್ರಹ್ಮಕಲಶಾಭಿಷೇಕ, ನ್ಯಾಸ ಪೂಜೆ, ಮಹಾಪೂಜೆ, ಅವಶ್ರುತ ಬಲಿ, ಪಲ್ಲಪೂಜೆ, ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ರಿಂದ ದಿಕ್ಪಾಲ ಹೋಮಗಳು, ನೂತನ ಬಲಿಪೀಠಗಳ ಪ್ರತಿಷ್ಠೆ, ಬ್ರಹ್ಮರಥಕ್ಕೆ ದಿಕ್ಪಾಲ ಹೋಮಗಳು, 101 ಕಲಶಾಭಿಷೇಕ, ಅಧಿವಾಸಹೋಮ, ಬ್ರಹ್ಮರಥಾಧಿವಾಸ, ಉರಗಬಂಧದ ಅಶ್ವತ್ಥಕಟ್ಟೆಯಲ್ಲಿ ನಾಗಸನ್ನಿಧಾನದಲ್ಲಿ ಕಟ್ಟೆ ಪೂಜೆ, ವಸಂತಕಟ್ಟೆ ಪೂಜೆ, ರಾತ್ರಿಪೂಜೆ, ಶ್ರೀ ಭೂತಬಲಿ ನಡೆಯಲಿದೆ.


16ರಂದು ಬ್ರಹ್ಮರಥ ಸಮರ್ಪಣೆ: ೆ.16ರಂದು ಬೆಳಗ್ಗೆ 9.30ರಿಂದ ಶ್ರೀ ಮಹಾಗಣಪತಿ ದೇವರಿಗೆ ನೂತನ ಬ್ರಹ್ಮರಥ ಸಮರ್ಪಣೆ, ರಥ ಕಲಶಾಭಿಷೇಕ, ರಥಬಲಿ, ಮಹಾಪೂಜೆ, 11ಕ್ಕೆ ಬಲಿ ಹೊರಟು ರಥಾರೋಹಣ, ಹಗಲು ಬ್ರಹ್ಮರಥೋತ್ಸವ. ರಾತ್ರಿ 9ರಿಂದ ದೇವರ ಶಯನ ಬಲಿ ಹೊರಟು ಉತ್ಸವ, ಪೇಟೆ ಸವಾರಿ, ವಸಂತಕಟ್ಟೆ ಪೂಜೆ, ರಾತ್ರಿ ಪೂಜೆ, ಶ್ರೀ ಭೂತಬಲಿ, ಶ್ರೀ ದೇವರ ಶಯನೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net