

ಮಂಗಳೂರು: ನಗರದ ಉರ್ವ ಬೋಳೂರಿನ ಪುರಾತನ ಪ್ರಸಿದ್ಧ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಐದು ದಿನ ನಡೆಯಲಿರುವ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಆರಂಭಗೊಂಡಿತು.
ಬೆಳಗ್ಗೆ ಶ್ರೀ ದೇವತಾ ಪ್ರಾರ್ಥನೆ, ದೀಪ ಪ್ರಜ್ವಲನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪಂಚಗವ್ಯ, ಪುಣ್ಯಾಹ ದೇವನಾಂದೀ, ಅಗ್ನಿ ಜನನ ಬ್ರಹ್ಮಕೂರ್ಚ ಹೋಮ, ನವಗ್ರಹ ಶಾಂತಿ, ಮೃತ್ಯುಂಜಯ ಶಾಂತಿ, ಪವಮಾನ ಶಾಂತಿ ನಡೆಯಿತು.
ಬಳಿಕ ಜರುಗಿದ ಭಜನಾಕಾರ್ಯಕ್ರಮದಲ್ಲಿ ವಿವಿಧ ಭಜನಾ ತಂಡಗಳು ಭಾಗವಹಿಸಿದವು. ಮಹಾಪೂಜೆ, ಅನ್ನಸಂತರ್ಪಣೆ, ಸಂಗೀತ ಕಾರ್ಯಕ್ರಮ ಬಳಿಕ ಸಂಜೆ ಜರುಗಿದ ಸುಮಂಗಲೆಯರ ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಸಹಸ್ರಾರು ಮಹಿಳೆಯರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಸಂಜೆ ಪುಣ್ಯಾಹ, ಭದ್ರಕಾಳೀ ಪೂಜೆ, ಭದ್ರಕಾಳಿ ಹೋಮ, ಭದ್ರಕಾಳೀ ಬಲಿ, ಭೂವರಹಾ ಶಾಂತಿ, ಪ್ರಸಾದ ಶುದ್ಧಿ, ಗೋಪೂಜಾ, ವಾಸ್ತುಪೂಜಾ, ವಾಸ್ತು ಬಲಿ, ವಾಸ್ತುಹೋಮ, ದಿಗ್ಬಲಿ, ಶಕ್ತಿ ಕಲಶ ಪ್ರತಿಷ್ಠಾ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ರಾತ್ರಿ ವಿವಿಧ ಗ್ರಾಮ ಸಭೆಯ ಮಹಿಳಾ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ವಿದುಷಿ ಜ್ಞಾನ ಐತಾಳ್ ನೇತೃತ್ವದ ಮಂಗಳೂರು ‘ಹೆಜ್ಜೆನಾದ’ ತಂಡದಿಂದ ನೃತ್ಯ- ಸಂಗೀತ ವೈಭವ ಜರುಗಿತು.
ಇಂದಿನ ಕಾರ್ಯಕ್ರಮ
ೆ.12 ರಂದು ಮುಂಜಾನೆ ಪ್ರಾಯಶ್ಚಿತ ಹೋಮಗಳು, ಬಿಂಬ ಶುದ್ಧಿ ವಿಧಿ, ಶಾಂತಿ ಹೋಮಗಳು ನೆರವೇರಲಿವೆ. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಗಾನ ಮಾಧುರ್ಯ- ಸಂಗೀತ ಕಾರ್ಯಕ್ರಮ, ಸಂಜೆ ಸುಮಂಗಲೆಯರ ಸಾಮೂಹಿಕ ಕುಂಕುಮಾರ್ಚನೆ ನೆರವೇರಲಿದೆ.
ೆಟೋ
ಎಂಎನ್‌ಜಿ- ೆಬ್ 11- ಕುಂಕುಮಾರ್ಚನೆ