

ಮಂಗಳೂರು: ಉರ್ವದಲ್ಲಿರುವ ಕನ್ನಡ ಮೊಯಿಲಿ ಸಮಾಜ ಸುಧಾರಕ ಸಂಘದ ವತಿಯಿಂದ ಇತ್ತೀಚೆಗೆ ಆಟಿಡೊಂಜಿ ದಿನ ಕಾರ್ಯಕ್ರಮ ಉರ್ವ ಬಳಿಯ ರಾಧಾಕೃಷ್ಣ ಮಂದಿರದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೊಳಲಿ ಕ್ಷೇತ್ರದ ವಂಶ ಪಾರಂಪರಿಕ ವಾದ್ಯಗಾರ ಪೊಳಲಿ ಚಂದ್ರಶೇಖರ ದೇವಾಡಿಗ ಅವರು ಶುಭ ಹಾರೈಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅವರು ಆಟಿಯ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಭಾಂಗಣದಲ್ಲಿ ನೂತನವಾಗಿ ಅಳವಡಿಸಲಾದ ಸಿಸಿ ಟಿವಿ ಉದ್ಘಾಟಿಸಲಾಯಿತು. ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಕನ್ನಡ ಮೊಯಿಲಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಭುಜಂಗ ಶ್ರೀಯಾನ್, ಮಹಿಳಾ ಮಂಡಲದ ಅಧ್ಯಕ್ಷೆ ಲತಾ ಅನಿಲ್, ಯುವಕ ಸಂಘದ ಅಧ್ಯಕ್ಷ ಸುರೇಶ ಕಲ್ಲಾವು, ಉಪಾಧ್ಯಕ್ಷ ಧನಲಕ್ಷ್ಮಿ ಅರುಣ್, ಕೋಶಾಧಿಕಾರಿ ಮಲ್ಲಿಕಾ ಶರತ್, ಜೊತೆ ಕಾರ್ಯದರ್ಶಿಗಳಾದ ವಸಂತ್ ಅತ್ತಾವರ್, ನಿಕ್ಷೇಪ, ಗೋಪಿನಾಥ, ಅರುಣ್ ಪಚ್ಚನಾಡಿ ಮತ್ತಿತರರು ಉಪಸ್ಥಿತರಿದ್ದರು.
ಅರುಣ್ ಉರ್ವ ಪ್ರಸ್ತಾವನೆಗೈದರು. ಶೋಭಾ ಗಂಗಾಧರ್ ಪ್ರಾರ್ಥಿಸಿದರು. ನಿತಿನ್ ಹೊಯಿಗೆಬೈಲ್ ವಂದಿಸಿದರು. ಕರುಣಾಕರ ಶ್ರೀಯಾನ್ ಹಾಗೂ ರಜತ್ ನಿರೂಪಿಸಿದರು.