ಅ.3ರಿಂದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

mng-1oct-mariyamma
Published on


ಮಂಗಳೂರು : ನಗರದ ಬೋಳೂರು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಅ.3ರಿಂದ 12ರ ವರೆಗೆ ನವರಾತ್ರಿ ಉತ್ಸವವು ಜರಗಲಿದೆ. ಉತ್ಸವದ ಅಂಗವಾಗಿ ಪ್ರತೀ ದಿನ ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ರಾತ್ರಿ 7.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ, ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಭಜನೆ ನೆರವೇರಲಿದೆ.
ಪ್ರತೀ ದಿನ ಸಾಯಂಕಾಲ 6ರಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದ್ದು, ಅ.3ರಂದು ಸನಾತನ ನಾಟ್ಯಾಲಯ ಬಲ್ಲಾಳ್‌ಭಾಗ್ ಇವರಿಂದ ನೃತ್ಯ ವೈವಿಧ್ಯ, 4ರಂದು ನಾಟ್ಯಾಲಯ ಉರ್ವ ಇವರಿಂದ ಭರತನಾಟ್ಯ, 5ರಂದು ಶ್ರೀ ಮಾರಿಯಮ್ಮ ಯಕ್ಷಗಾನ ಬಾಲ ಸಂಸ್ಕಾರ ಕೇಂದ್ರ ಇವರಿಂದ ಶಾಂಭವಿ ವಿಜಯ ಯಕ್ಷಗಾನ ಬಯಲಾಟ, 6ರಂದು ನರ್ತನ ಆರ್ಟ್ಸ್ ಕಲಾವಿದರು ಉರ್ವ ಇವರಿಂದ ವಿವಿಧ ವಿನೋದಾವಳಿಗಳು, 7ರಂದು ಲಲಿತಾ ಕಲಾ ಸದನ ಉರ್ವಸ್ಟೋರ್ ಇವರಿಂದ ಭರಟನಾಟ್ಯ, 8ರಂದು ಸೌಜನ್ಯ ಮಹಿಳಾ ಮಂಡಳಿ, ಉರ್ವ ಹೊಗೈಬೈಲು ಇವರಿಂದ ವಿವಿಧ ವಿನೋದಾವಳಿಗಳು, 9ರಂದು ನಾಟ್ಯರಾಧನೆ ಇವರಿಂದ ಭರತನಾಟ್ಯ, ಜಾನಪದ ನೃತ್ಯ, 10ರಂದು ನಾಟ್ಯ ಲಹರಿ, ಉರ್ವ ಇವರಿಂದ ವಿವಿಧ ವಿನೋದಾವಳಿಗಳು, 11ರಂದು ಸಪ್ನಾ ಬಳಗ ಇವರಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಳ್ಳಲಿವೆ.
ಅ.12ರಂದು ಸಾಯಂಕಾಲ 6ಕ್ಕೆ ಕದ್ರಿ ನೂಪುರ ನೃತ್ಯ ಶಾಲಾ ಸಂಚಾಲಕಿ ಕಲಾನಿಧಿ ಇವರಿಂದ ಭರತನಾಟ್ಯ. ರಾತ್ರಿ 8ಕ್ಕೆ ಮಹಾರಂಗಪೂಜೆ, ರಥೋತ್ಸವ ನಡೆಯಲಿದೆ. ನವರಾತ್ರಿ ಉತ್ಸವ ಪ್ರಯುಕ್ತ ಪ್ರತೀ ದಿನ ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್ ಕೋಡಿಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net