ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಧರ್ಮ ಶಿಕ್ಷಣ ಶಿಬಿರ ಆರಂಭ

uuuuuuu
Published on

ಮಂಗಳೂರು : ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತೀ ಶನಿವಾರ ಸಾಯಂಕಾಲ ನಡೆಯಲಿರುವ ಧರ್ಮ ಶಿಕ್ಷಣ ಶಿಬಿರವನ್ನು ದ.ಕ.ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ.ಸಿ. ಕೋಟ್ಯಾನ್ ಉದ್ಘಾಟಿಸಿದರು.
ಹಿರಿಯರ ಕಾಲದಲ್ಲಿ ಪ್ರತೀ ಹಿಂದು ಮನೆಗಳಲ್ಲಿ ಕೆಲವು ಧರ್ಮಾಧಾರಿತ ಪದ್ಧತಿಗಳಿದ್ದವು. ಇಂದಿನ ನವ ನಾಗರೀಕತೆಯ ಕಾಲದಲ್ಲಿ ಉತ್ತಮ ಸಂಸ್ಕಾರ ಮತ್ತು ಪದ್ಧತಿಗಳು ಕ್ಷೀಣಿಸುತ್ತಿವೆ. ಇಂದಿನ ಯುವ ಜನಾಂಗದಲ್ಲಿ ಮತ್ತೆ ಉತ್ತಮ ನಡವಳಿಕೆಗಳನ್ನು ಮೂಡಿಸಬೇಕಾಗಿದೆ. ಈ ಕಾರ್ಯದಲ್ಲಿ ದೇವಸ್ಥಾನಗಳ ಪಾತ್ರ ಕೂಡಾ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ವಿಶ್ವ ಹಿಂದು ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕೃತಿ-ಸಂಸ್ಕಾರಗಳ ತಿಳುವಳಿಕೆ ಬರಬೇಕು. ಸಂಸ್ಕೃತಿಯ ಅರಿವಿನೊಂದಿಗೆ ಧರ್ಮಕ್ಕೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ
ಚಿಂತನೆಯೂ ಅಗತ್ಯ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್ ಕೋಡಿಕಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ ಮಾತೃ ಶಕ್ತಿ ಘಟಕದ ಸಹ ಪ್ರಮುಖ್ ಸುರೇಖ ರಾವ್, ಜಿಲ್ಲಾ ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಉಷಾರಾಣಿ ಬೋಳೂರು, ಕಾರ್ಪೋರೇಟರ್ ಗಣೇಶ್ ಕುಲಾಲ್, ಏಳು ಪಟ್ಣ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಲೋಕೇಶ್ ಸುವರ್ಣ, ಉದ್ಯಮಿ ಅನಿಲ್ ಕರ್ಕೇರ ಮುಖ್ಯ ಅತಿಥಿಗಳಾಗಿದ್ದರು. ಕ್ಷೇತ್ರದಲ್ಲಿ ಬಾಲ ಸಂಸ್ಕಾರ ಕೇಂದ್ರ ನಡೆಸುತ್ತಿರುವ ದಾಮೋದರ ಚೆಟ್ಟಿಯಾರ್ ಮತ್ತು ಪರಿಸರ ಪ್ರೇಮಿ ಅರವಿಂದ ಸೀತಾನದಿ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ದೇವಸ್ಥಾನದ ಮೊಕ್ತೇಸರರಾದ ಮಾಧವ ಪುತ್ರನ್, ಯಾಧವ ಸುವರ್ಣ, ಯಾಧವ ಸಾಲ್ಯಾನ್, ಪುರುಷೋತ್ತಮ್ ಕೋಟ್ಯಾನ್,
ಯಶವಂತ್ ಮೆಂಡನ್, ರಂಜನ್ ಕಾಂಚನ್, ವಾಸುದೇವ ಸಾಲ್ಯಾನ್, ಅಮರ್‌ನಾಥ್ ಸುವರ್ಣ, ಸುರೇಶ್ ಕುಂದರ್ ಹಾಗೂ ದೇವಸ್ಥಾನದ ಮುಖ್ಯ ಅರ್ಚಕ ಶಿವಾನಂದ ಕನ್ನಡ, ಮ್ಯಾನೇಜರ್ ಪುರುಷೋತ್ತಮ್ ಕೋಟ್ಯಾನ್ ಉಪಸ್ಥಿತರಿದ್ದರು.
ಮೊಗವೀರ ಏಳು ಪಟ್ಣದ ಮಾಜಿ ಅಧ್ಯಕ್ಷ ಗೌತಮ್ ಸಾಲ್ಯಾನ್ ಕೋಡಿಕಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಬಂಗೇರ ವಂದಿಸಿದರು. ಯಶವಂತ ಬೋಳೂರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net