ಮೇರಿಯಮ್ಮ ಜಗತ್ತಿನ ದುಖಃದಲ್ಲಿರುವವರ ತಾಯಿಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬದಲ್ಲಿ ಬಿಷಪ್ ಡಾ.ಜೆರಾಲ್ಡ್ ಲೋಬೊ

mng--10 Dec Urva church
Published on

ಮಂಗಳೂರು: ಯೇಸುವಿನ ತಾಯಿ ಮೇರಿಯಮ್ಮ ಜಗತ್ತಿನ ಕಷ್ಟ ದುಃಖದಲ್ಲಿರುವ ಮಂದಿಗೆ ತಾಯಿಯಾಗಿ ನೆರವು ನೀಡುತ್ತಾ ಇರುವುದರಿಂದ ಅವರನ್ನು ಜಗತ್ತಿನ ತಾಯಿ ಎಂದೇ ಪರಿಗಣಿಸಲಾಗುತ್ತಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.


ಭಾನುವಾರ ಲೇಡಿಹಿಲ್‌ನ ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬದ ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ವಹಿಸಿ ಮಾತನಾಡಿ, ಮೇರಿಯಮ್ಮ ಸ್ವರ್ಗದಲ್ಲಿದ್ದರೂ ಕೂಡ ಅವರ ಹೃದಯ ದುಃಖದಲ್ಲಿ ಇರುವವವರ ಜತೆಗೆ ರೋಗದಲ್ಲಿ ಕಂಗಾಲಾದವರ ಜತೆಗೆ ಮರುಗುತ್ತಾ ದೇವ ಪುತ್ರನಾದ ಯೇಸುವಿನಲ್ಲಿ ಬೇಡಿ ದುಃಖದಲ್ಲಿರುವ ಮಂದಿಯ ಕಣ್ಣೀರು ಒರೆಸುವ ಜತೆಗೆ ರೋಗ ರುಜಿನವನ್ನು ಗುಣಪಡಿಸುವ ಕೆಲಸ ಮಾಡುತ್ತಿದ್ದಾರೆ. ದೇವರ ಮಾತನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದ ಕಾರಣ ಮಾತೆ ಮೇರಿಯಮ್ಮ ಮಹಿಳೆಯರಲ್ಲಿಯೇ ಅತೀ ಉನ್ನತ ಸ್ಥಾನದಲ್ಲಿರುವವರು ಎಂದರು.


ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಮೊನ್ಸಿಂಜೋರ್ ಮ್ಯಾಕ್ಸಿಂ ನೊರೊನ್ಹಾ, ಉರ್ವ ಚರ್ಚಿನ ಪ್ರಧಾನ ಧರ್ಮಗುರು ಾ. ಬೆಂಜಮಿನ್ ಪಿಂಟೋ, ಎಪಿಸ್ಕೋಪಲ್ ವಿಕಾರ್ ಾ. ಡೇನಿಯಲ್ ಸಂಪತ್ ವೇಗಸ್, ಉರ್ವ ಚರ್ಚಿನ ಾ. ಹೆನ್ರಿ ಸಿಕ್ವೇರಾ, ಸಹಾಯಕ ಧರ್ಮ ಗುರು ಾ. ಜಾನ್ಸನ್ ಪಿರೇರಾ ಸೇರಿದಂತೆ ಸುತ್ತಮುತ್ತಲಿರುವ ಚರ್ಚ್‌ಗಳ ಸರಿಸುಮಾರು 60ಕ್ಕೂ ಅಧಿಕ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಸಾವಿರಕ್ಕೂ ಅಧಿಕ ಮಂದಿ ಭಕ್ತರು ಈ ಸಂಭ್ರಮದ ಬಲಿಪೂಜೆಯಲ್ಲಿ ಭಾಗವಹಿಸಿ ಧನ್ಯರಾದರು. ಬಲಿಪೂಜೆಯ ಬಳಿಕ ಪರಮ ಪ್ರಸಾದದ ಮೆರವಣಿಗೆ ಉರ್ವ ಚರ್ಚಿನ ಮೂಲಕ ಉರ್ವ ಮಾರ್ಕೆಟ್, ಗಾಂಧಿನಗರ, ಮಣ್ಣಗುಡ್ಡೆ, ಲೇಡಿಹಿಲ್ ಸರ್ಕಲ್ ಮೂಲಕ ಉರ್ವ ಚರ್ಚ್‌ಗೆ ಮತ್ತೆ ಬರಲಾಯಿತು. ಈ ಬಳಿಕ ಸಾವಿರಾರು ಮಂದಿ ಪರಮ ಪ್ರಸಾದದ ಆಶೀರ್ವಾದವನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net