ಉರ್ವ ಚಾಮುಂಡೇಶ್ವರೀ ಹವ್ಯಾಸಿ ಯಕ್ಷಗಾನ ಮೇಳ ಉದ್ಘಾಟನೆ

mng--25 Oct Chamundeshwari Mela Urva
Published on

ಮಂಗಳೂರು: ಉರ್ವ ಹೊಯಿಗೆಬೈಲ್ ಬಳಿಯ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ‘ಶ್ರೀ ಚಾಮುಂಡೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಎಂಬ ನೂತನ ಹವ್ಯಾಸಿ ಯಕ್ಷಗಾನ ಮೇಳ ಇತ್ತೀಚೆಗೆ ಆರಂಭಗೊಂಡಿತು.


ಅಶೋಕನಗರ-ಉರ್ವ ಬಂಟರ ಸಂಘದ ಅಧ್ಯಕ್ಷ ರವಿಚಂದ್ರ ಶೆಟ್ಟಿ ಅಶೋಕನಗರ, ನವರಾತ್ರಿಯ ಪರ್ವ ಕಾಲದಲ್ಲಿ ಆರಂಭಗೊಂಡ ಮೇಳ ಯಶಸ್ಸು ಗಳಿಸಲಿ ಎಂದರು.


ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಎಚ್. ಆರ್. ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಅವರು ಮಾತನಾಡಿ, ಯಕ್ಷಗಾನವು ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾಗಿದ್ದು, ನೂತನ ಹವ್ಯಾಸಿ ಮೇಳದ ಕಲಾವಿದರು ಭವಿಷ್ಯದಲ್ಲಿ ನಾಡಿನ ಉತ್ತಮ ಯಕ್ಷಗಾನ ಕಲಾವಿದರಾಗಿ ಮಿಂಚಲಿ ಎಂದರು.


ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಆನಂದ ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬರ್ಕೆ ಫ್ರೆಂಡ್ಸ್‌ನ ಸ್ಥಾಪಕ ಅಧ್ಯಕ್ಷ ಯಜ್ಞೇಶ್ವರ ಬರ್ಕೆ, ಮಾಜಿ ಅಧ್ಯಕ್ಷ ಸುಚೀಂದ್ರ ಅಮೀನ್, ಕಾರ್ಪೊರೇಟರ್ ಗಣೇಶ್ ಕುಲಾಲ್, ಉರ್ವ ಕುಲಾಲರ ಸಂಘದ ಅಧ್ಯಕ್ಷ ಆನಂದ ಉರ್ವ, ಉದ್ಯಮಿಗಳಾದ ಉದಯ್ ಕುಮಾರ್ ಶೆಟ್ಟಿ, ಸುಧಾಕರ್ ಆಳ್ವ, ಇಂಜಿನಿಯರ್ ಬಾಬಾ ಅಲಂಕಾರ್, ಕಂಟ್ರಾಕ್ಟರ್ ಶೇಖರ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್‌ನ ಮನಮೋಹನ್ ದೇವಾಡಿಗ, ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ದೀಪಕ್ ಕುಲಾಲ್, ರವಿ, ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


ಅಕ್ಷತಾ ಜೆ.ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ವಂದಿಸಿದರು. ಬಳಿಕ ಮೇಳದ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net