ಮೆಹಬೂಬಸುಭಾನಿ ಉರುಸ್ 10ರಿಂದ

07 NRD-5
Published on

ನರಗುಂದ: ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಹಜರತ್ ಮೆಹೆಬೂಬ್‌ಸುಭಾನಿ ದರ್ಗಾದ ಉರುಸು ಹಾಗೂ ಲಿಂ.ಶರಣ ಶ್ರೀ ಇಮಾಮಸಾಹೇಬರ 19ನೇ ಪುಣ್ಯಸ್ಮರಣೋತ್ಸವ ಅ.10ರಂದು ಹಮ್ಮಿಕೊಳ್ಳಲಾಗಿದೆ.

ಪುಣ್ಯ ಸ್ಮರಣೋತ್ಸವ ನಿಮಿತ್ತ ಅ.9ರಂದು ಸಂಜೆ 8ಗಂಟೆಗೆ ಸಂದಲ್, ರಾತ್ರಿ 9ಗಂಟೆಗೆ ತಾಲೂಕಿನ ವಿವಿಧ ತಂಡಗಳಿಂದ ಭಜನಾ ಸಂಗೀತ ಜಾಗರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅ.10ರಂದು ಬೆಳಗ್ಗೆ 10ಗಂಟೆಗೆ ಪಟ್ಟಣದ ಅರ್ಭಾಣ ಗಲ್ಲಿಯ ಹಜರತ್ ಮೆಹೆಬೂಬ್‌ಸುಭಾನಿ ದರ್ಗಾದಿಂದ ಇಮಾಮಸಾಹೇಬರ ಸನ್ನಿಧಿ ವರೆಗೆ ಗಲೀಫ್ ಮೆರವಣಿಗೆ, ದರ್ಗಾದಲ್ಲಿ ಲಕ್ಷ್ಮೀಪೂಜೆ ಕಾರ್ಯಕ್ರಮ ಜರುಗುವುದು.

ಮಧ್ಯಾಹ್ನ 12ಗಂಟೆಗೆ ಜರುಗುವ ಉರುಸು ಫಾತೇಹಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಭೈರನಹಟ್ಟಿ ಶಾಂತಲಿಂಗ ಶ್ರೀಗಳು, ಶರಣ ಬಾಬುಸಾಹೇಬ್ ಜಮಾದಾರ, ರಾಘವೇಂದ್ರ ಶೆಟ್ಟಿ, ಜ್ಯೋತಿಬಾ ಕನ್ಸೆ, ಸುಭಾಸ ಘೋರ್ಪಡೆ, ಕಾಸೀಂಸಾಬ್ ಜಮಾದಾರ, ಮೊಹಮ್ಮದ್ ನಾಯ್ಕರ ಪಾಲ್ಗೊಳ್ಳುವರು. ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ. ಅ.11ರಂದು ರಾತ್ರಿ 8 ಗಂಟೆಗೆ ಮರಿ ಉರುಸು ಕಾರ್ಯಕ್ರಮ ಜರುಗಲಿದೆ ಎಂದು ಶರಣರ ಸೇವಾ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net