

ಉಪ್ಪಿನಬೆಟಗೇರಿ: ಗ್ರಾಮದ ಹೊಸಗಾಡ ಓಣಿಯಲ್ಲಿ ಹಜರತ್ ಪೀರ ರಹಮಾನ್ ಶಾಹ ವಲಿಯವರ ಉರುಸು ಅ. 4 ರಿಂದ 6 ರವರೆಗೆ ಜರುಗಲಿದೆ. ಉರುಸಿನ ನಿಮಿತ್ತ ಅ. 4ರಂದು ರಾತ್ರಿ ಸಂದಲ್ ಇದ್ದು, ಅಮರಅಲಿ ಸಾ.ಗವನಾಳ ಅವರಿಂದ ರಾತೀಬ್ ಖೇಲ್ ಕಾರ್ಯಕ್ರಮ ಜರುಗುವುದು. ಅ. 5ರಂದು ಗುರುವಾರ ಸಂಜೆ ಗ್ರಾಮದ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹಾಗೂ ಇಸ್ಲಾಂ ಧರ್ಮಗುರು ಶ್ರೀ ಆರೀಫುಲ್ ಹಕ್ ಶಾ ಖಾದರಿ ಕಲಂದರ ಸಮ್ಮುಖದಲ್ಲಿ ಉರುಸು ಜರುಗಲಿದೆ. ಅ. 6ರಂದು ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ, ಅಂದು ರಾತ್ರಿ 9.30ಕ್ಕೆ ಕೊಲ್ಹಾಪುರದ ಚಾಂದಬಿ ಬಾನು ಹಾಗೂ ಬೆಂಗಳೂರಿನ ತೌಸಿಫ್ ಖಾದ್ರಿ ಅವರಿಂದ ಕವ್ವಾಲಿ ಮುಕಾಬಲಾ ಏರ್ಪಡಿಸಲಾಗಿದೆ.