

ಗೊಳಸಂಗಿ : ಸಮೀಪದ ಕೂಡಗಿ ಗ್ರಾಮದ ಹಜರತ್ ಸೈಯದ್ ಶಹಜಾದೆ ಮಸ್ತಾನಶಾ ದರ್ಗಾದ ಉರುಸು ಕಾಯಕ್ರಮ ಭಾನುವಾರ ಚಾಲನೆ ಪಡೆದಿದ್ದು, ಜ.22 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಜ.20 ರಂದು ಮಧ್ಯಾಹ್ನ 1 ಗಂಟೆಯಿಂದ ಶಂಕರಗೌಡ ದೊಡ್ಡನಗೌಡ ಪಾಟೀಲ ಅವರ ಮನೆಯಿಂದ ದೇವರ ಕುದುರೆಯ ಸವಾರಿಯ ಮೆರವಣಿಗೆ ಮಹೇರಾಜಪೀರಾಸಾಹೇಬ ಜಾಗೀರದಾರ ನೇತೃತ್ವದಲ್ಲಿ ಜರುಗಲಿದೆ. ಅನ್ನಂ ಸಂತರ್ಪಣೆ ಇರಲಿದೆ. ರಾತ್ರಿ 10 ಗಂಟೆಗೆ ಕವ್ವಾಲಿ ಗಾಯಕರಾದ ಜುನೇದ ಸುಲ್ತಾನರಿಂದ ಕವ್ವಾಲಿ ಕಾರ್ಯಕ್ರಮ ದರ್ಗಾ ಚೌಕ್ ಬಳಿಯ ಗಡೇದ ಇನ್‌ಪ್ರಾಟೆಕ್ ಮೈದಾನದಲ್ಲಿ ಜರುಗಲಿದೆ.
ಜ.21 ರಂದು ಸಂಜೆ 4 ಗಂಟೆಗೆ ನಿಖಾಲಿ ಜಂಗಿ ಕುಸ್ತಿ, ರಾತ್ರಿ 10.30 ಗಂಟೆಗೆ ಜೇವರ್ಗಿಯ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘದಿಂದ ‘ಮುದುಕನ ಮದುವೆ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಜ.22 ರಂದು ರಾತ್ರಿ 7 ರಿಂದ ಉರ್ದು ಶಾಲಾ ಟಗರಿನ ಕಾಳಗ ಏರ್ಪಡಿಸಲಾಗಿದೆ ಎಂದು ದರ್ಗಾ ಕಮಿಟಿ ಪ್ರಕಟಣೆ ತಿಳಿಸಿದೆ.