ಫೆ.೧೭ ರಿಂದ ಉರೂಸ್ ಸಮಾರಂಭ

c980f09f-4e0d-401f-a403-cd9f2c0e757a
Published on

ಮಡಿಕೇರಿ: ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಫೆ.೧೭ ರಿಂದ ಫೆ.೧೯ರವರೆಗೆ ಮುಹಿಯದೀನ್ ಜುಮ್ಮಾ ಮಸೀದಿ ಪೇರಡ್ಕದಲ್ಲಿ ಆಯೋಜಿಸಲಾಗಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇರಡ್ಕ ದರ್ಗಾ ಶರೀಫ್ ಆವರಣದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಫೆ.೧೭ ರಂದು ಜುಮಾ ನಮಾಜಿನ ಬಳಿಕ ಪೇರಡ್ಕ ಎಂ.ಜೆ.ಎಂ ಅಧ್ಯಕ್ಷ ಎಸ್.ಆಲಿಹಾಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಅಪರಾಹ್ನ ೨ ಗಂಟೆಗೆ ಮುಖಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಂತರ ಸರ್ವಧರ್ಮ ಸಮ್ಮೇಳನ ಹಾಗೂ ಉಲಮಾ, ಉಮರಾ ಸಂಗಮ ನೆರವೇರಲಿದೆ ಎಂದು ತಿಳಿಸಿದರು.


ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಪಾಜೆ ಗ್ರಾ.ಪಂ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಮಾತನಾಡಿ, ಫೆ.೨೦ ರಂದು ೨ ಗಂಟೆಗೆ ಪಳ್ಳಿಬೇರ್ಚೆ ನಡೆಯಲಿದ್ದು, ರಾತ್ರಿ ೭.೩೦ಕ್ಕೆ ತೆಕ್ಕಿಲ್ ಮಹಮ್ಮದ್ ಹಾಜಿ ಮೆಮೋರಿಯಲ್ ತಖ್‌ವೀಯ್ಯತ್ತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಜಾತಿ ಮತ ಭೇದವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಗೂನಡ್ಕ-ಪೇರಡ್ಕ ಎಂಆರ್‌ಡಿಎ ಅಧ್ಯಕ್ಷ ಜಾಕೀರ್ ಹುಸೈನ್, ಸಂಪಾಜೆ ಗ್ರಾ.ಪಂ ಸದಸ್ಯ ಎಸ್.ಕೆ.ಮಹಮ್ಮದ್ ಹನೀಫ್, ಪ್ರಮುಖರಾದ ಉನೈಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net