

ಬೇಲೂರು: ಪಟ್ಟಣದ ಕೆಂಪೇಗೌಡ ರಸ್ತೆಯ ವಿಷ್ಣು ಸಮುದ್ರ ಕೆರೆ ಸಮೀಪದ ದರ್ಗಾದಲ್ಲಿ ಹಜರತ್ ಸೈಯದ್ ಕ್ವಾಜಾ ನಿಜಾಮುದ್ದೀನ್ ಷಾ ಖಾದರಿ ಅವರ ಉರುಸ್ ಅನ್ನು ಶುಕ್ರವಾರ ಸಂಜೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಉರುಸ್ ಅಂಗವಾಗಿ ಸಂಪ್ರದಾಯದಂತೆ ಕೋಟೆ ಜಾಮಿಯ ಮಸೀದಿಯಿಂದ ಚಾದರ್ ಮತ್ತು ಗಂಧ ಲೇಪಿತ ಹಾರವನ್ನು ದರ್ಗಾಕ್ಕೆ ನೀಡಿ ಹಿಂದುಗಳು ಸೌಹಾರ್ದದಿಂದ ಅಚರಿಸಿದರು. ಉರುಸ್‌ಗೆ ಆಗಮಿಸಿದ ಭಕ್ತರಿಗೆ ಸಿಹಿ ಮತ್ತು ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಜಾಮಿಯಾ ಮಸೀದಿಯ ಗುರುಗಳಾದ ಇರ್ಫಾನ್ ರಜಾ, ಕೋಟೆ ಜಾಮಿಯ ಮಸೀದಿ ಅಧ್ಯಕ್ಷ ರಫೀಕ್, ಕಾರ್ಯದರ್ಶಿ ಏಜಾಸ್, ಜಯಕರ್ನಾಟಕ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು, ಮುಖಂಡರಾದ ಸಲ್ಮಾನ್, ಕೋಟೆ ತೌಫಿಕ್, ಮನ್ಸೂರ್ ಇತರರು ಇದ್ದರು.