ಹುಬ್ಬಳ್ಳಿ: ಇಲ್ಲಿಯ ಹಜರತ್ ಖ್ವಾಜಾ ಗರೀಬ್ ನವಾಜ್ 813ನೇ ಸಂದಲ್ ಹಾಗೂ ಉರುಸಿನ ಅಂಗವಾಗಿ ಕರ್ನಾಟಕ ಮುಸ್ಲಿಂ ರೈಟ್ಸ್ ಫೌಂಡೇಷನ್ ವತಿಯಿಂದ ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಹೊರಗಡೆ ಚಳಿಯಲ್ಲಿ ಹೊದಿಕೆ ಇಲ್ಲದೇ ನಡುಗುವ ವಯೋವೃದ್ಧರು, ನಿರ್ಗತಿಕರಿಗೆ ಬ್ಲಾಂಕೆಟ್ಗಳನ್ನು ವಿತರಣೆ ಮಾಡಲಾಯಿತು.
ಅತಿಥಿಗಳಾಗಿದ್ದ ಲಿಂಗಾಯತ ಸಮಾಜ ಮುಖಂಡ ರಾಜಶೇಖರ ಮೆಣಸಿನಕಾಯಿ ಬ್ಲಾಂಕೆಟ್ ವಿತರಣೆ ಮಾಡಿ ಮಾತನಾಡಿ, ಸರ್ಕಾರ ಬಡವರಿಗಾಗಿ ಹಲವು ಯೋಜನೆ ಜಾರಿಗೆ ತಂದಿದೆ, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೆಕೆಂದು ಹೇಳಿದರು.
ಸಮಾಜದ ಹಿರಿಯ ಮುಖಂಡ ಕರೀಮ್ ಲಕ್ಕುಂಡಿ ನೇತೃತ್ವ ವಹಿಸಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ, ಕಾರ್ಮಿಕ ಮುಖಂಡ ಬಾಬಾಜಾನ ಮುಧೋಳ ಮಾತನಾಡಿದರು.
ಫೌಂಡೇಷನ್ ಸಂಚಾಲಕ ನಜೀರ ಅಹ್ಮದ ಕೋಲಕಾರ, ರಿಯಾಜ ಅಹ್ಮದ ಮುಲ್ಲಾ, ಶಫೀ ಮುದ್ದೇಬಿಹಾಳ, ಸಾದಿಕ್ ಮಹ್ಮದ, ಬಸೀರ ಅಹ್ಮದ ಮುಧೋಳ, ಪೀರಸಾಬ ನದಾಫ, ಆಸೀಫ ಜುಂಗುರ, ಜಾಕೀರ ಅತ್ತಾರ, ಮುಂತಾದವರು ಪಾಲ್ಗೊಂಡಿದ್ದರು.