ಸನ್ಮಾರ್ಗದಲ್ಲಿರುವವರಿಗೆ ಸತ್ಯದಲ್ಲಿ ವಿಶ್ವಾಸ :ಉಳ್ಳಾಲದಲ್ಲಿ ಅಬ್ದುಲ್ ರಹ್ಮಾನ್ ಸಖಾಫಿ ಅಭಿಮತ ದರ್ಗಾ ಉರುಸ್ ಧಾರ್ಮಿಕ ಸಭೆ

URUS
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸನ್ಮಾರ್ಗದಲ್ಲಿರುವವರಿಗೆ ಸತ್ಯದಲ್ಲಿ ವಿಶ್ವಾಸವಿದ್ದು, ದುರ್ಮಾರ್ಗದವರಿಗೆ ಸತ್ಯ ಸದಾ ಸುಳ್ಳಾಗಿಯೇ ಇರುವುದು ಮಾತ್ರವಲ್ಲದೆ ಅವರ ಮನಸ್ಸು ಸದಾ ಸಂಶಯದಿಂದ ಕೂಡಿರುತ್ತದೆ ಎಂದು ಕುಟ್ಯಾಡಿ ಸಿರಾಜುಲ್ ಹುದಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಹೇಳಿದರು.

ಉಳ್ಳಾಲ ದರ್ಗಾದ 22ನೇ ಪಂಚವಾರ್ಷಿಕ ಉರುಸ್ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಉಸ್ತಾದ್ ಮಹಮೂದ್ ಫೈಝಿ ವಾಲೆಮುಂಡೂರು ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ವಾಗ್ಮಿ ನೌಫಲ್ ಸಖಾಫಿ ಕಳಸ ಧಾರ್ಮಿಕ ಪ್ರವಚನ ನೀಡಿದರು. ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಹಿಕಮಿ ಕಾಮಿಲ್ ಸಖಾಫಿ, ಸಯ್ಯದ್ ಝಿಯಾದ್ ತಂಙಳ್, ಹಸನ್ ಅಬೂಬಕ್ಕರ್ ಅಶ್ರಫಿ ಬಾಂಬೆ, ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಕೋಶಾಧಿಕಾರಿ ನಾಝೀಮ್ ರಹ್ಮಾನ್ ಮುಕಚ್ಚೇರಿ, ಕಾರ್ಯದರ್ಶಿ ಶಿಹಾಬ್, ಜತೆ ಕಾರ್ಯದರ್ಶಿ ಮುಸ್ತಫಾ, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್, ಸದಸ್ಯರಾದ ಮಹಮ್ಮದ್ ಬಾವ ಉಳ್ಳಾಲ್, ಹಸನ್, ಮುಶರಫ್, ತೌಫೀಕ್, ಇಬ್ರಾಹಿಂ ಬೋಳಾರ, ಇಮ್ತಿಯಾಜ್, ಮನ್ಸೂರ್, ಮಹಮ್ಮದ್ ಸಲಾಂ, ಆದಂ ಅಹ್ಸನಿ, ರಶಾದ್ ಬಿ.ಎಂ. ಮಹಮ್ಮದ್ ಕಮಾಲ್, ರಫೀಕ್ ಬಿಎಂಆರ್, ದರ್ಗಾ ಕಚೇರಿ ವ್ಯವಸ್ಥಾಪಕ ಶಿಹಾಬ್ ತಂಙಳ್, ಮಾಜಿ ಅಧ್ಯಕ್ಷ ಯು.ಕಣಚೂರು ಮೋನು, ಮಹಮ್ಮದ್ ಸುಳ್ಯ, ಅಶ್ರಫ್ ಸಅದಿ ಮಲ್ಲೂರು, ಕೈಕೋ ಮಸೀದಿಯ ಖತೀಬ್ ಶಾಫಿ ಮದನಿ, ಸದರ್ ಮಹಮ್ಮದ್ ಮುಸ್ಲಿಯಾರ್, ಅಧ್ಯಕ್ಷ ಅಬ್ದುಲ್ ಲತೀಫ್, ಕಾರ್ಯದರ್ಶಿ ಶಹಬಾನ್, ಕೋಶಾಧಿಕಾರಿ ಕುಂಞಮೋನು, ಅಬ್ದುಲ್ ರಹ್ಮಾನ್ ಕಣಚೂರು ಮತ್ತಿತರರು ಉಪಸ್ಥಿತರಿದ್ದರು. ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

16ರಂದು ಮುಖ್ಯಮಂತ್ರಿ ಉಳ್ಳಾಲಕ್ಕೆ

ಮೇ 16ರಂದು ಬೆಳಗ್ಗೆ 10ಕ್ಕೆ ಉಳ್ಳಾಲ ಗ್ರಾೃಂಡ್ ಮಸೀದಿಗೆ ಇಂಡಿಯನ್ ಗ್ರಾೃಂಡ್ ಮುಫ್ತಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಂಜೆ 5ಕ್ಕೆ ನಡೆಯುವ ಸಾಮಾಜಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೇ 15ರಂದು ಮಧ್ಯಾಹ್ನ ಎರಡು ಗಂಟೆಗೆ ಸನದುದಾನ ಸಮ್ಮೇಳನ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ತಿಳಿಸಿದ್ದಾರೆ.

ಸನ್ಮಾರ್ಗ ಯಾವುದು, ದುರ್ಮಾರ್ಗ ಯಾವುದು ಎಂಬುದನ್ನು ಯೋಚಿಸಲು ದೇವರು ಮನುಷ್ಯನಿಗೆ ಬುದ್ಧಿಶಕ್ತಿ ನೀಡಿದ್ದಾನೆ, ಇತರ ಜೀವಿಗಳಿಗಿಂತಲೂ ಮನುಷ್ಯ ಉನ್ನತ ಸ್ಥಾನದಲ್ಲಿದ್ದಾನೆ. ಆದರೆ ಮನುಷ್ಯ ಕೃತಜ್ಞತೆ ಇಲ್ಲದವನಾಗಿದ್ದು, ನಷ್ಟದಲ್ಲಿದ್ದಾನೆಂದು ಕುರಾನ್‌ನಲ್ಲಿ ತಿಳಿಸಲಾಗಿದೆ. ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಕುಟ್ಯಾಡಿ ಸಿರಾಜುಲ್ ಹುದಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಕಾರ್ಯದರ್ಶಿ https://www.vijayavani.net/malengallu-bhajana-mandali-anniversary https://www.vijayavani.net/congratulations-to-the-dcm-course-achievers

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net