

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ವಿಶ್ವಾದ್ಯಂತ ಕೋಟ್ಯಂತರ ಮಸೀದಿ, ಮದ್ರಸಗಳು, ಅನಾಥಾಲಯಗಳು, ಶಿಕ್ಷಣ ಕೇಂದ್ರ, ಬಡಮಕ್ಕಳ ಹಾಸ್ಟೆಲ್ಗಳು ವಕ್ಫ್ ರೂಪದಲ್ಲಿ ಬಂದ ಸ್ವತ್ತುಗಳಿಂದಾಗಿ ನೆಲೆನಿಂತಿವೆ. ವಕ್ಫ್ ಎನ್ನುವುದು ಇಲ್ಲದಿದ್ದರೆ ಇಸ್ಲಾಂ ಕೂಡ ಇಲ್ಲ ಎನ್ನುವ ಪರಿಸ್ಥಿತಿ ಬರಬಹುದು, ಇಸ್ಲಾಂ ನೆಲೆ ನಿಂತಿರುವುದೇ ವಕ್ಫ್ನಿಂದಾಗಿದೆ ಎಂದು ಕೇರಳ ಹಜ್ ಸಮಿತಿ ಅಧ್ಯಕ್ಷ ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಹೇಳಿದರು.
ಉಳ್ಳಾಲ ದರ್ಗಾದ 22ನೇ ಪಂಚವಾರ್ಷಿಕ ಉರುಸ್ ಪ್ರಯುಕ್ತ ಮಂಗಳವಾರ ಧಾರ್ಮಿಕ ಸಭೆಯಲ್ಲಿ ‘ವಕ್ಫ್ ತಿದ್ದುಪಡಿ ಕಾಯ್ದೆ ಮತ್ತು ಗಂಡಾಂತರಗಳು’ ವಿಷಯದಲ್ಲಿ ಮಾತನಾಡಿದರು.
ಅಸಯ್ಯದ್ ಜಲಾಲುದ್ದೀನ್ ತಂಙಳ್ ದುವಾ ನೆರವೇರಿಸಿದರು. ವಳವೂರು ಮುಹಮ್ಮದ್ ಸಅದಿ ಪ್ರಭಾಷಣ ಮಾಡಿದರು. ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು, ನಿರ್ದೇಶಕ ಅಬ್ದುಲ್ ರಹ್ಮಾನ್, ದಾರಂದಬಾಗಿಲು ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಮುಸ್ತಫಾ, ಕೋಶಾಧಿಕಾರಿ ಮುಸ್ತಫಾ ಡಿ.ಬಿ., ಖತೀಬ್ ಜಾಬಿರ್ ಫಾಳಿಲಿ, ಸದರ್ ಅಬ್ದುಲ್ ರಝಾಕ್ ಮದನಿ, ಉಳ್ಳಾಲಬೈಲ್ ಬೊಟ್ಟು ಮಸೀದಿ ಖತೀಬ್ ನೌಫಲ್ ಮದನಿ, ಸದರ್ ಶಾಹಿನ್ ಮದನಿ, ಅಧ್ಯಕ್ಷ ಹಸೈನಾರ್, ಕಾರ್ಯದರ್ಶಿ ನವಾಝ್, ಕೋಶಾಧಿಕಾರಿ ಕುಂಞಿ ಮೋನು, ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ವೇ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಕೋಶಾಧಿಕಾರಿ ನಾಝಿಂ ರಹ್ಮಾನ್ ಮುಕಚ್ಚೇರಿ, ಸದಸ್ಯರಾದ ಝೈನುದ್ದೀನ್ ಮೇಲಂಗಡಿ, ಝಿಯಾದ್ ತಂಙಳ್, ಇಮ್ತಿಯಾಝ್, ಮೊಯಿದ್ದೀನ್ ಪಟ್ಲ, ಅಬೂಬಕ್ಕರ್ ಹೈದರಾಲಿನಗರ, ಮಹಮ್ಮದ್ ಮುಸ್ತಫಾ, ಮಯ್ಯದ್ದಿ, ಆಝಾದ್ ಇಸ್ಮಾಯಿಲ್, ಅರೆಬಿಕ್ ಕಾಲೇಜಿನ ಪ್ರೊ.ಇಬ್ರಾಹಿಂ ಅಹ್ಸನಿ, ಕೇಂದ್ರ ಜುಮಾ ಮಸೀದಿ ಖತೀಬ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು. ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.
ಮನುಷ್ಯ ಎಷ್ಟೇ ದೊಡ್ಡ ಸಿರಿವಂತನಾದರೂ, ಆಸ್ತಿ, ಹಣ, ಅಂತಸ್ತು, ಅಧಿಕಾರ ಇದ್ದರೂ ಕೊನೆಗೆ ಕೊಂಡೊಯ್ಯುವುದು ಕೇವಲ ಶ್ವೇತ ವಸ್ತ್ರ ಮಾತ್ರ. ಜೀವಿತಾವಧಿಯಲ್ಲಿ ದೇವನ ಹೆಸರಲ್ಲಿ ವಕ್ಫ್ ರೂಪದಲ್ಲಿ ಮಾಡಿದ ದಾನ ಮರಣದ ಬಳಿಕ ರಕ್ಷೆಯಾಗಿ ನಿಲ್ಲುತ್ತದೆ. ಉರುಸ್ ಎಂದರೆ ಕೇವಲ ಲೈಟಿಂಗ್, ಸಂತೆ ವ್ಯಾಪಾರ ಮಾತ್ರವಲ್ಲ, ಪ್ರತಿದಿನ ದೊಡ್ಡ ಪಂಡಿತರು ಆಗಮಿಸಿ ಧಾರ್ಮಿಕ ವಿಚಾರಗಳಲ್ಲಿ ಹಿತವಚನ ನೀಡುತ್ತಾರೆ. ಈ ಮಹತ್ವದ ಕಾರ್ಯಕ್ರಮದಲ್ಲೂ ಉರುಸ್ಗೆ ಬರುವವರು ಭಾಗವಹಿಸಿ ಧಾರ್ಮಿಕ ಜ್ಞಾನ ಗಳಿಸುವುದು ಮುಖ್ಯ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಅಧ್ಯಕ್ಷ, ಕೇರಳ ಹಜ್ ಸಮಿತಿ