

ಮಂಗಳೂರು: ದೇಶವು ಬ್ರಿಟಿಷರ ದಶಕಗಳ ಆಳ್ವಿಕೆಯಿಂದ ಬಿಡುಗಡೆಗೊಂಡು ಸ್ವಾತಂತ್ರೃ ಪಡೆಯಲು ಸಹಸ್ರಾರು ಹೋರಾಟಗಾರರು ಬಲಿದಾನವಾಗಿದ್ದಾರೆ. ದೇಶದ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಿ ಭಾರತ ದೇಶದ ಆರ್ಥಿಕ ಪ್ರಗತಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ಕಠಿಣವಾಗಿ ಶ್ರಮಿಸಬೇಕೆಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ದೇವದಾಸ್ ರೈ ಹೇಳಿದರು.
ಉರುಮನೆ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ 77ನೇ ವಾರ್ಷಿಕ ಸ್ವಾತಂತ್ರೊೃೀತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಹಮ್ಮದ್ ಆಶ್ರಫ್, ಸದಸ್ಯ ಉಸ್ಮಾನ್, ಯುವ ಕಾಂಗ್ರೇಸ್ ಸಮಿತಿಯ ಸದಸ್ಯ ನಾಸೀರ್ ಸಮಾನಿಗೆ, ಶಾಲಾ ಶಿಕ್ಷಕರಾದ ರೂಪಿಯಾನ, ಜೂಲಿಯಾನ ಸಲ್ದಾನ, ಅಶ್ವಿನಿ ಉಪಸ್ಥಿತರಿದ್ದರು.
ಶಿಕ್ಷಕ ಲೋಕಪ್ಪ ನಿರೂಪಿಸಿದರು. ಶಿಕ್ಷಕಿ ಸುಶ್ಮಿತ ವಂದಿಸಿದರು.
ಬಳಿಕ ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ವಿದ್ಯಾಸಿರಿ ಯೋಜನೆ ಹಾಗೂ ಸ್ವಾತಂತ್ರೋತ್ಸವದ ಅಂಗವಾಗಿ 90 ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ಮತ್ತು ಆಟದ ಚೆಂಡುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಪದಾಧಿಕಾರಿಗಳಾದ ರವಿ ಜಲನ್, ಜಗನ್ನಾಥ್ ಶೆಟ್ಟಿ, ಸಂತೋಷ್ ಶೇಟ್, ಗಣೇಶ್ ಉಪಸ್ಥಿತರಿದ್ದರು. ಈ ಶಿಕ್ಷಣ ಸಾಮಗ್ರಿಗಳನ್ನು ವಸಂತ್ ಮಲ್ಯರು ಪ್ರಾಯೋಜಿಸಿದ್ದರು.