

ಗುರುಗುಂಟಾ: ಇಲ್ಲಿನ ಅಂಬಾಭವಾನಿ ದೇಗುಲದಲ್ಲಿ ಶುಕ್ರವಾರ ಪ್ರತಿಷ್ಠಾಪನೆ ಅಂಗವಾಗಿ ದೇವಿ ವಿಗ್ರಹವನ್ನು ಗುರುವಾರ ಭಾವಸಾರ ಕ್ಷತ್ರಿಯ ಸಮಾಜದಿಂದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಬೆಳಗ್ಗೆ ದೇವಿ ವಿಗ್ರಹವನ್ನು ಸರ್ವಾಲಂಕೃತ ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ ಡೊಳ್ಳು ಸೇರಿದಂತೆ ಸಕಲ ವಾದ್ಯ-ಮೇಳ ಮತ್ತು 25 ಜೋಡಿ ಸುಮಂಗಲೆಯರ ಕುಂಭ-ಕಳಸದೊಂದಿಗೆ ಮೆರವಣಿಗೆ ಆರಂಭವಾಯಿತು. ಪಟ್ಟಣಶೆಟ್ಟಿ ಓಣಿ, ಚಿದಾನಂದ, ಮುಖ್ಯಬೀದಿ, ಸಂತೆ ಮಾರುಕಟ್ಟೆ, ಮರಾಠ ಗಲ್ಲಿ ಮೂಲಕೆ ಸಾಗಿ ನೂತನ ದೇಗುಲ ತಲುಪಿತು. ದೇವಾಲಯವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ರಾಜು ಬಳಮಕರ, ಉಪಾಧ್ಯಕ್ಷ ಪರಶುರಾಮ ಹಂಚಾಟೆ, ಮಾಜಿ ಅಧ್ಯಕ್ಷ ಸುಭಾಷ್ ಬಳಮಕರ, ಪ್ರಮುಖರಾದ ಮಹಾದೇವ ಬಳಮಕರ, ಸಂಜಯ ಬಳಮಕರ, ಜಗದೀಶ್ ಬಳಮಕರ, ಶಿವಾಜಿ ಬಳಮಕರ, ಬಾಬುರಾವ್ ಹಂಚಾಟೆ, ಅಂಬಾದಾಸ್ ಬಾಸುತ್ಕರ್ ರಮೇಶ್ ಬಳಮಕರ್, ಮಧು ಬಳಮಕರ್, ಶ್ರೀಕಾಂತ್, ಪ್ರಶಾಂತ ಬೋಂದಾಡೆ, ದಶರಥ ಹಂಚಾಟೆ, ಖಂಡೋಜಿ, ಚಂದ್ರಕಾಂತ್ ಬಳಮಕರ, ಗುಂಡೂರಾವ್ ಇತರರಿದ್ದರು.