ಪದವೀಧರ ಶಿಕ್ಷಕರ ಸಮಸ್ಯೆ ಬಗೆಹರಿಸಲು ಒತ್ತಾಯ

6sdp3 MANAVI
Published on

ಸಿದ್ದಾಪುರ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ರಾಜ್ಯ ಸಂಘದ ನಿರ್ದೇಶನದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಹಸೀಲ್ದಾರರ ಮೂಲಕ ಆ. 12ರಂದು ನಡೆಯಲಿರುವ ಪದವೀಧರ ಶಿಕ್ಷಕರ ಸಮಸ್ಯೆ ಬಗೆಹರಿಸಲು ಬೆಂಗಳೂರು ಚಲೋ ಹೋರಾಟದ ಭಾಗವಾಗಿ ಹಕ್ಕೊತ್ತಾಯ ಪತ್ರ ನೀಡಿ ಸರ್ಕಾರಕ್ಕೆ ಕಳುಹಿಸಿಕೊಡಲು ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಸತೀಶ ಹೆಗಡೆ ಅವರು ಹೋರಾಟದ ಕುರಿತು ಮಾಹಿತಿ ನೀಡಿ ಪದವೀಧರ ಶಿಕ್ಷಕರಿಗೆ ‘ಸಿ’ ಮತ್ತು ‘ಆರ್’ ರೂಲ್ಸ್​ನಲ್ಲಿ ಆದ ಅನ್ಯಾಯ ಹೋಗಲಾಡಿಸಿ 2016ಕ್ಕೂ ಮೊದಲು ನೇಮಕವಾದ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಎಂದು ಪದನಾಮೀಕರಿಸಬೇಕು. ಇಲ್ಲವಾದರೆ ರಾಜ್ಯ ಸಂಘದ ನಿರ್ದೇಶನದಂತೆ ತರಗತಿ ಬಹಿಷ್ಕಾರ ಸೇರಿ ಮತ್ತಿತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಿಇಒ ಎಂ.ಎಚ್. ನಾಯ್ಕ ಅವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.

ನಂತರ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ನಾಗರಾಜ ಮಡಿವಾಳ, ಮಂಜುಳಾ ಪಟಗಾರ, ಜಿಲ್ಲಾ ಸಂಘದ ಸಹ ಕಾರ್ಯದರ್ಶಿಗಳಾದ ಬಸವರಾಜ ಕಡಪಟ್ಟಿ, ನಾಗರಾಜ ನಾಯ್ಕ, ಜಿ.ಆರ್. ಹೆಗಡೆ, ಕೆ.ಎನ್. ಹೆಗಡೆ, ಸುರೇಶ ನಾಯ್ಕ, ರಾಮನಾಥ ನಾಯ್ಕ, ಜೆ.ಎನ್. ಗೌಡ, ಸುಜಾತಾ ಎಚ್., ಚಂದ್ರಿಕಾ ಸಿ.ಎ, ಅಕ್ಕಮ್ಮ ನಾಯ್ಕ, ಜ್ಯೋತಿ ಕೆ.ಎಲ್., ರೂಪಾ ಹೆಬ್ಬಾರ, ಶ್ರೀಕಾಂತ ನಾಯ್ಕ, ಮಂಜುನಾಥ ನಾಯ್ಕ, ಕೆ.ಪಿ. ರವಿ,ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net