ಉಗ್ರ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ

12 ckm 2
ಚಿಕ್ಕಮಗಳೂರು ಎಡಿಸಿ ನಾರಾಯಣ ರಡ್ಡಿಕನಕರಡ್ಡಿ ಅವರ ಮೂಲಕ ರಾಷ್ಟçಪತಿಗೆ ಮನವಿ ಸಲ್ಲಿಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿರುವ ಸಮಯದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹೀನಾ ಕೃತ್ಯವೆಸಗಿರುವ ಉಗ್ರ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Published on

ಚಿಕ್ಕಮಗಳೂರು: ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿರುವ ಸಮಯದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹೀನಾ ಕೃತ್ಯವೆಸಗಿರುವ ಉಗ್ರ ಸಂಘಟನೆಯನ್ನು ಸದೆಬಡಿದು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಎಡಿಸಿ ನಾರಾಯಣ ರಡ್ಡಿ ಕನಕರಡ್ಡಿ ಅವರ ಮೂಲಕ ರಾಷ್ಟçಪತಿಗೆ ಮನವಿ ಸಲ್ಲಿಸಿದರು.

ಹಿಂದೂ ಭಕ್ತರ ಬಸ್ಸಿನ ಮೇಲೆ ಪಾಕಿಸ್ತಾನಿ ಘೋಷಿತ ಇಸ್ಲಾಮಿಕ್ ಜಿಹಾದಿ ಭಯೋತ್ಪಾದಕ ಸಂಘಟನೆ ಕೃತ್ಯವೆಸಗಿ ರಾಷ್ಟçದ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ರಂಗನಾಥ್, ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ವೈಷ್ಣೋ ದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುವ ವೇಳೆಯಲ್ಲಿ ಅಮಾಯಕ ಹಿಂದೂ ಬಾಂಧವರ ಮೇಲೆ ಉಗ್ರ ಸಂಘಟನೆ ದಾಳಿ ನಡೆಸಿ ಸುಮಾರು ೧೦ ಮಂದಿ ನಿರ್ದೋಷಿ ಹಿಂದೂ ಯಾಂತ್ರಿಕರ ಸಾವಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಥಹ ಅಮಾನವೀಯ ಕೃತ್ಯದಿಂದ ದೇಶವು ಆಘಾತಗೊಳಗಾಗಿದೆ. ಜಮ್ಮು ಕಾಶ್ಮೀರವು ಇಂದಿಗೂ ಪಾಕಿಸ್ತಾನÀ ಘೋಷಿತ ಭಯೋತ್ಪಾದನೆ ಸಂಘಟನೆಯಿAದ ಮುಕ್ತವಾಗಿಲ್ಲ. ೩೭೦ ವಿಧಿಯನ್ನು ರದ್ದುಪಡಿಸಿದ ನಂತರ ಆಶಾದೀಪ ಪ್ರಜ್ವಲಿಸಿದರೂ ಭಯೋತ್ಪಾದಕರ ಅಟ್ಟಹಾಸ ಕಡಿಮೆಯಾಗಿಲ್ಲ ಎಂದು ದೂರಿದರು.
ಮುಖ್ಯವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವ ಉಗ್ರ ಸಂಘಟನೆಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನೆಲ್ಲೇ ಪಾಕಿಸ್ತಾನದ ಹಸ್ತಕ್ಷೇಪ ಸ್ಪಷ್ಟವಾಗಿದೆ. ಹೀಗಾಗಿ ಎನ್‌ಡಿಎ ನೇತೃತ್ವದ ನೂತನ ಸರ್ಕಾರ ಹೇಯ ಕೃತ್ಯವೆಸಗಿರುವ ಇಸ್ಲಾಮಿಕ್ ಭಯೋತ್ಪಾದಕರು ಹಾಗೂ ದೇಶದ ಸ್ವಾಯತ್ತತೆಗೆ ಸವಾಲೊಡ್ಡುತ್ತಿರುರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಸಂಯೋಜಕ ಶ್ಯಾಮ್ ವಿ.ಗೌಡ, ನಗರ ಸಂಯೋಜಕ ಸುನೀಲ್ ಆಚಾರ್ಯ, ಧರ್ಮ ಪ್ರಸಾರ ಪ್ರಮುಖ ಪ್ರದೀಪ್, ಗೋರಕ್ಷಾ ಪ್ರಮುಖ ಕಿರಣ್, ಮಠ ಮಂದಿರ ಪ್ರಮುಖ್ ಆಟೋ ಶಿವಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net