ಮಸ್ಕಿ: ತಾಲೂಕಿನ ತೋರಣದಿನ್ನಿಯಲ್ಲಿ ಯೂರಿಯಾ ಖರೀದಿಗೆ ರೈತರು ಎಣ್ಣೆ ಬೀಜ ಬೆಳೆಗಾರರ ಸಂಘದ ಅಂಗಡಿ ಮತ್ತು ಗೋದಾಮುಗಳಿಗೆ ಮುಗಿ ಬಿದ್ದಿರುವುದು ಭಾನುವಾರ ಕಂಡುಬಂತು.
ಯೂರಿಯಾ ಅಭಾವದಿಂದ ಸಮರ್ಪಕವಾಗಿ ಸಿಗದ ಕಾರಣ ರಸಗೊಬ್ಬರಕ್ಕಾಗಿ ಬಂದ ರೈತರು ಮತ್ತು ನೌಕರರ ನಡುವೆ ವಾಗ್ವಾದ ನಡೆಯಿತು. ಈಗಾಗಲೇ ಭತ್ತ ನಾಟಿ ಮಾಡಿ 40 ದಿನ ಕಳೆದಿದೆ. ಕೆಲವೆಡೆ ಒಂದು ಬಾರಿ, ಇನ್ನು ಕೆಲವಡೆ ಎರಡು ಬಾರಿ ಗೊಬ್ಬರ ಹಾಕಿದ್ದು, ಈಗ ಗೊಬ್ಬರದ ಅವಶ್ಯಕತೆ ಇದೆ. ಆದರೆ, ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ.
ಕೆಲ ರೈತರು ಮಾನ್ವಿಯ ಎಡಿ ಅವರಿಗೆ ಕರೆ ಮಾಡಿ ವಿಚಾರಿಸಿದರೆ ತೊರಣದಿನ್ನಿಗೆ ಮೂರು ಲೋಡ್ ಗೊಬ್ಬರ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಸೊಸೈಟಿ ಅಧಿಕಾರಿಗೆ ಕೇಳಿದರೆ ಶಾಸಕರು ಮತ್ತು ಸಂಸದರ ಸೂಚನೆ ಮೇರೆಗೆ ಗೂಗೆಬಾಳ, ತಾಯಮ್ಮ ಕ್ಯಾಂಪ್, ಬಸಾಪುರ ಗ್ರಾಮಗಳಿಗೆ ಕಳಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಗೊಬ್ಬರ ಕೊಡುವವರೆಗೂ ಸೊಸೈಟಿ ನೌಕರರಿಗೆ ದಿಗ್ಬಂಧನ ಹಾಕಲಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಹಿಂಬಾಗಿಲಿನ ಮೂಲಕ ಕಾಳ ಸಂತೆಯಲ್ಲಿ ಮಾರಿಕೊಂಡು ಗೊಬ್ಬರದ ಅಭಾವ ಸೃಷ್ಟಿಸುತ್ತಿದ್ದಾರೆ. ರೈತರ ನೋವು ಇವರಿಗೆ ಅರ್ಥವಾಗುತ್ತಿಲ್ಲ. ಗಂಗಾಧರ ರೈತ ತೋರಣದಿನ್ನಿ