ಯೂರಿಯಾ ಪೂರೈಕೆಗೆ ಸಂಸದರ ಮನವಿ

CTD MP GOVINDA KARAJOLA-----3
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೊರತೆಯಿಂದ ರೈತರು ಆತಂಕಗೊಂಡಿದ್ದು,ಕೂಡಲೇ ಜಿಲ್ಲೆಗೆ ಮುಂದಿನ ಸೆಪ್ಟೆಂಬರ್ ಅಂತ್ಯದ ವರೆಗೆ ಅವಶ್ಯವಿರುವ ಅಂದಾಜು 6 ಸಾವಿರ ಮೆಟ್ರಿಕ್ ಟನ್ ಯೂರಿಯಾದ ತುರ್ತು ಸರಬರಾಜಿಗೆ ಒತ್ತಾಯಿಸಿ ಸಂಸದ ಗೋವಿಂದ ಎಂ.ಕಾರಜೋಳ ಅವರು ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.

ಜಿಲ್ಲೆಯಲ್ಲಿ 2025 ಮುಂಗಾರು ಹಂಗಾಮಿಗೆ 3,16,831 ಹೆಕ್ಟೇರ್ ಪ್ರದೇಶದ ಗುರಿಗೆ 1.44,955 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆ ಳೆಗಳ ಗುರಿ ಇದ್ದು,ಮುಂಗಾರು ಹಂಗಾಮು ಪ್ರಧಾನವಾಗಿದೆ. ಮೆಕ್ಕೆಜೋಳ ಹೆಚ್ಚಾಗಿ ಚಿತ್ರದುರ್ಗ,ಹೊಳಲ್ಕೆರೆ ಭಾಗಗಳಲ್ಲಿ ಭಿತ್ತನೆಯಾಗಿ ದ್ದು,ಸಿರಿಧಾನ್ಯಗಳನ್ನು ಹೆಚ್ಚಾಗಿ ಹೊಸದುರ್ಗ ತಾಲೂಕಿನಲ್ಲಿ ಬಿತ್ತನೆಯಾಗಿದೆ. 2025ರ ಮುಂಗಾರು ಹಂಗಾಮಿನಲ್ಲಿ ಈವರೆಗೆ ಜಿಲ್ಲೆಯಲ್ಲಿ 82,085 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು,ಹಾಲಿ 30ರಿಂದ 45 ದಿನದ ಬೆಳೆ ಇರುತ್ತದೆ,ಇದಕ್ಕೆ ಮೇಲು ಗೊಬ್ಬರವಾಗಿ ಯೂರಿಯಾ ಉಪ ಯೋಗಿಸುತ್ತಾರೆ.

ಜಿಲ್ಲೆಗೆ ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ರವರೆಗೆ 26,643 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇರುತ್ತದೆ. ಕಳೆದ ಮಾರ್ಚ್ ಅಂತ್ಯ ಕ್ಕೆ ಜಿಲ್ಲೆಯಲ್ಲಿ 8,339 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಜಿಲ್ಲೆಗೆ ಈವರೆಗೆ ಆರಂಭಿಕ ದಾಸ್ತಾನು 8,339 ಮೆಟ್ರಿಕ್ ಟನ್ ಯೂರಿಯಾ ಸೇರಿ 21,874 ಮೆಟ್ರಿಕ್ ಟನ್ ಯೂರಿಯಾ ಸರಬರರಾಜಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ಅಗತ್ಯವಿರುವ ಅಂದಾಜು 6ಸಾವಿರ ಮೆಟ್ರಿಕ್ ಟನ್ ಯೂರಿಯಾವನ್ನು ಜಿಲ್ಲೆಗೆ ಸರಬರಾಜು ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಗೋವಿಂದ ಕಾರಜೋಳ ಅವರು ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net