ಯೂರಿಯಾ ಅಭಾವ ನೀಗಿಸಲು ಕ್ರಮವಹಿಸಲಿ

Published on

ಕುರುಗೋಡು: ಯೂರಿಯಾ ಗೊಬ್ಬರದ ಅಭಾವದಿಂದ ರೈತರಿಗೆ ಸಂಕಷ್ಟ ಕ್ಕೀಡಾಗಿದ್ದು

ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಕ್ರಮವಹಿಸಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕುಮಾರಸ್ವಾಮಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಬಾರಿ ದರ ಕುಸಿತ ಹಾಗೂ ಇತರ ಸಮಸ್ಯೆಯಿಂದ ಅನ್ನದಾತರು ನಷ್ಟಕ್ಕೀಡಾಗಿದ್ದು. ಆದರೆ ಈ ಬಾರಿಯ ಹಂಗಾಮಿನಲ್ಲಿ ತಾಲೂಕಿನ ಬಹುತೇಕ ಕಡೆ ಉತ್ತಮ ಮಳೆಯಾಗಿದ್ದು, ಸದ್ಯ ರೈತರು ಮೆಕ್ಕೆಜೋಳ, ತೊಗರಿ, ಹತ್ತಿ ಬಿತ್ತನೆ ಮಾಡುವ ಜತೆಗೆ ಮೆಣಸಿನಕಾಯಿ ನಾಟಿ ಮಾಡುತ್ತಿದ್ದಾರೆ.

ಆದರೆ ಸೊಸೈಟಿ ಸೇರಿ ಇತರೆಡೆ ಅಗತ್ಯ ಯೂರಿಯಾ ಗೊಬ್ಬರದ ಅಭಾವ ಇದೆ. ಇದರಿಂದ ರೈತರ ಫಸಲಿಗೆ ಅಡಚಣೆಯಾಗಲಿದ್ದು ಕೂಡಲೇ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಕಾಲಕ್ಕೆ ರೈತರಿಗೆ ಗೊಬ್ಬರ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ತಿಪ್ಪೇಸ್ವಾಮಿ, ನಟರಾಜ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net