ಉರ್ದು ಕಡ್ಡಾಯ ನಿಯಮ ತೆರವುಗೊಳಿಸಿ

1mnv01
Published on

ಮಾನ್ವಿ: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕ ಸಂದರ್ಭದಲ್ಲಿ ಉರ್ದು ತಿಳಿದಿರುವುದು ಕಡ್ಡಾಯ ಎನ್ನುವ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು ಎಂದು ಹಿಂದು ಜನಜಾಗೃತಿ ಸಮಿತಿ ತಾಲೂಕು ಘಟಕದ ಅಧ್ಯಕ್ಷ ವರಪ್ರಸಾದ್ ಒತ್ತಾಯಿಸಿದರು.

ಉಪತಹಸೀಲ್ದಾರ್ ವಿನಾಯಕರಾವ್‌ಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದರು. ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಉರ್ದು ಭಾಷೆ ಆಯ್ಕೆ ಮಾಡದಿದ್ದಲ್ಲಿ, ಪೂರ್ಣಪ್ರಮಾಣದಲ್ಲಿ ಅರ್ಜಿ ಭರ್ತಿಗೆ ಅವಕಾಶವಿಲ್ಲ. ಈ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಡಳಿತದಲ್ಲಿ ಉರ್ದು ಭಾಷೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದರು.

ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಸರ್ಕಾರ ಕೆಲ ಸಮುದಾಯಗಳ ಒಲೈಕೆಗಾಗಿ ಆಡಳಿತದಲ್ಲಿ ಉರ್ದು ಭಾಷೆಗೆ ಅವಕಾಶ ನೀಡಿದೆ. ಈ ಮೂಲಕ ಅಂಗನವಾಡಿಗಳಲ್ಲಿ ಉರ್ದು ಭಾಷಿಕರೇ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಈ ಕುರಿತು ಅಗತ್ಯ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಆಂಜನೇಯ, ಹೇಮಣ್ಣ, ವೇಣುಗೋಪಾಲ, ಆನಂದ ಭೋವಿ, ಪಿ.ಸುರೇಶ, ಎಂ.ಶ್ರೀನಿವಾಸ, ಮಂಜುನಾಥ, ಮಾರುತಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net