ಕೋಲಾರದಲ್ಲಿ ನಗರಸಾರಿಗೆ ಸೇವೆ ಪ್ರಾರಂಭ

1 KLR 04
Published on

ಕೋಲಾರ: ನಗರದಲ್ಲಿ ಇನ್ನು ಮುಂದೆ ಬೆಂಗಳೂರು ಮಹಾನಗರ ಸಾರಿಗೆ ರೀತಿಯಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಕವಚವುಳ್ಳ ನಗರಸಾರಿಗೆ ಸಂಚಾರ ಪ್ರಾರಂಭಗೊಂಡಿದೆ. ಜೂ.30 ರಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ನಗರ ಸಾರಿಗೆಯ ಬಸ್ಸುಗಳು ಸಂಗೊಂಡನಹಳ್ಳಿಯಿಂದ ಹಸಾಳಗೇಟ್​ ಮತ್ತು ವಡಗೂರು ಗೇಟ್​ಯಿಂದ ಅಮ್ಮೇರಹಳ್ಳಿವರೆಗೂ ಕೋಲಾರ ವಾಹನ ನಿಲ್ದಾಣದಿಂದ ಬೆಳಗ್ಗೆ 6.50 ರಿಂದ ಸಂಜೆ 18.50 ರವರೆಗೆ 80 ಟ್ರಿಪ್​ಗಳನ್ನು ಮಾಡಲಾಗುತ್ತಿದೆ.

ವಾಹನಗಳು ಸಾಮಾನ್ಯ ಮತ್ತು ವೇಗದೂತ ವಾಹನಗಳಿಗಿಂತ ವಿಭಿನ್ನ ಬಣ್ಣದ ವಾಹನಗಳಾಗಿರುವುದರಿಂದ ಸಾರ್ವಜನಿಕ ಪ್ರಯಾಣಿಕರು ನಗರ ಸಾರಿಗೆ ವಾಹನಗಳನ್ನು ದೂರದಿಂದಲೇ ಗುರುತಿಸಲು ಸಹ ಅನುಕೂಲವಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಧರ್​ ತಿಳಿಸಿದ್ದಾರೆ.

ಪ್ರಾಯೋಗಿಕವಾಗಿ 2 ರೂಟ್​ಗಳಿಂದ 4 ಬಸ್ಸುಗಳ ಸಂಚಾರ ಪ್ರಾರಂಭವಾಗಿದೆ. ನಗರದ ಇತರೆ ಕಡೆಗಳಲ್ಲಿ ಸಂಚಾರ ಪ್ರಾರಂಭಿಸಲಾಗುವುದು. ಸರ್ವೇ ನಡೆಸಿ ಅವಶ್ಯಕತೆಗೆ ತಕ್ಕಂತೆ ಹೆಚ್ಚುವರಿ ಬಸ್ಸುಗಳನ್ನು ಹಾಗೂ ಹೆಚ್ಚುವರಿ ರೂಟ್​ಗಳನ್ನು ಮಾಡಲಾಗುವುದು. ಕೋಲಾರದಿಂದ ಶ್ರೀನಿವಾಸಪುರ ಮತ್ತು ಚಿಂತಾಮಣಿ ಬಸ್ಸುಗಳು ಹೆಚ್ಚಾಗಿ ಇರುವ ಕಾರಣ ಕೋಡಿಕಣ್ಣೂರು, ಸಿಬಿಐಟಿ ಕಾಲೇಜು ತನಕ ನಗರಸಾರಿಗೆ ವಿಸ್ತಾರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ರಸ್ತೆಯೂ ಸೇರಿ ಅಂತರಗಂಗೆ ಮತ್ತು ನಗರದ ಕೆಲವು ವಾರ್ಡ್​ಗಳಿಗೆ ಹಾಗೂ ಟೇಕಲ್​ ರಸ್ತೆಗೆ ನಗರಸಾರಿಗೆ ವಿಸ್ತರಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

01 ಕೆಎಲ್​ಆರ್​ 04

ಕೋಲಾರ ನಗರ ಸಂಚಾರ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಚಾಲನೆ ನೀಡಿದರು. ಶಾಸಕ ಕೊತ್ತೂರು ಮಂಜುನಾಥ್​, ಎಂಎಲ್​ಸಿ ನಸೀರ್​ ಅಹ್ಮದ್​, ಅನಿಲ್​ಕುಮಾರ್​, ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಧರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net