ಯಶಸ್ವಿಯಾಗದ ಭಾನುವಾರದ ಲಾಕ್ಡೌನ್

LOCKDOWN
Published on

ಯಾದಗಿರಿ: ದಿನೇದಿನೆ ಹೆಮ್ಮಾರಿಯಂತೆ ಕಾಡುತ್ತಿರುವ ಕರೊನಾ ನಿಯಂತ್ರಣಕ್ಕೆ ಸಕರ್ಾರ ಒಂದು ವಾರದ ಲಾಕ್ಡೌನ್ ಜಾರಿಗೊಳಿಸಿದೆ. ಆದರೆ ಭಾನುವಾರದ ಲಾಕ್ಡೌನ್ ಜಿಲ್ಲೆಯಲ್ಲಿ ಅಷ್ಟೊಂದು ಪರಿಣಾಮಕಾರಿ ಎನಿಸಿಲ್ಲ.

ಸರ್ಕಾರ ಪ್ರತಿ ಭಾನುವಾರ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿದೆ. ಆದರೆ ನಗರದಲ್ಲಿ ಜನತೆ ಈ ಆದೇಶಕ್ಕೆ ಕ್ಯಾರೆ ಎನ್ನದೆ ಬಿಂದಾಸ್ ಸಂಚರಿಸುತ್ತಿದ್ದರು. ನಗರದ ಕೆಲ ಬಡಾವಣೆಗಳಲ್ಲಿ ದಿನಸಿ ವ್ಯಾಪಾರಿಗಳು ತಮ್ಮ ಅಂಗಡಿ ತೆರೆದು ವಹಿವಾಟಿಯಲ್ಲಿ ತೊಡಗಿರುವುದು ಕಂಡಿತು.

ಸಾರಿಗೆ ಸಂಸ್ಥೆ ಬಸ್ಗಳ ಸೇವೆ ಸ್ಥಗಿತಗೊಳಿಸಿದ ಪರಿಣಾಮ ಕೇಂದ್ರ ಮತ್ತು ಸಿಟಿ ಬಸ್ ನಿಲ್ದಾಣಗಳಲ್ಲಿ ಜನಸಂಚಾರ ಕಾಣಲಿಲ್ಲ. ಖಾಸಗಿ ವಾಹನ, ಆಟೋ ಸಂಚಾರವೂ ಇರದ ಕಾರಣ ಗ್ರಾಮೀಣ ಭಾಗದಿಂದ ಬಂದ ಜನತೆ ಕೊಂಚ ಪರದಾಡುವಂತಾಯಿತು.

ಜಿಲ್ಲೆಯಲ್ಲಿ ಕರೊನಾ ರಣಕೇಕೆ ಮುಂದುವರಿಸಿದ್ದರೂ ಜನತೆ ಜಿಲ್ಲಾಡಳಿತದ ನಿದರ್ೇಶನ ಪಾಲಿಸದಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ಪ್ರಜ್ಞಾವಂತರು ಬೇಸರ ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net