ಅರ್ಬನ್ ಬ್ಯಾಂಕ್‌ನಿಂದ ಇತರೆಡೆ ಶಾಖೆ

100000
ಸದಲಗಾ ಅರ್ಬನ್ ಸೌಹಾರ್ದ ಬ್ಯಾಂಕ್ 62ನೇ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿದರು. ಸುನೀಲಕುಮಾರ ಖೋತ, ಉದಯಕುಯಮಾರ ಪಾಟೀಲ, ಅಶ್ವಿನಿ ಪಾಟೀಲ, ದಿವ್ಯಾಲಕ್ಷ್ಮೀ ಲಡಗೆ ಇತರರಿದ್ದಾರೆ.
Published on

ಬೋರಗಾಂವ: ಸದಲಗಾ ಅರ್ಬನ್ ಸೌಹಾರ್ದ ಬ್ಯಾಂಕ್ ವತಿಯಿಂದ ಶೀಘ್ರ ಚಿಕ್ಕೋಡಿ, ಕೊಗನೋಳಿ ಹಾಗೂ ಘಟಪ್ರಭಾ ನಗರಗಳಲ್ಲಿ ಶಾಖೆ ತೆರೆಯಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ ಪಾಟೀಲ ಹೇಳಿದರು.

ಸಮೀಪದ ಸದಲಗಾ ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬ್ಯಾಂಕ್‌ನ 62ನೇ ವಾರ್ಷಿಕ ಸಭೆ ಮಾತನಾಡಿ, ಬ್ಯಾಂಕ್ ಪ್ರತಿ ವರ್ಷವೂ ಪ್ರಗತಿ ಸಾಧಿಸಿದೆ. ಸದಸ್ಯರು ಬ್ಯಾಂಕ್‌ನ ವಿವಿಧ ಸಾಲ, ಠೇವು ಯೋಜನೆಗಳ ಲಾಭ ಪಡೆಯಬೇಕು. ಸದಸ್ಯರಿಗೆ ಉಚಿತವಾಗಿ ಎಟಿಎಂ ಕಾರ್ಡ್ ನೀಡಲಾಗುತ್ತಿದೆ. ಬೋರಗಾಂವದಲ್ಲಿ ಎಟಿಎಂ ಸ್ಥಾಪಿಸಬೇಕೆಂದು ಸದಸ್ಯರು ಒತ್ತಾಯವಿದ್ದು, ಶೀಘ್ರವೇ ತೆರೆಯಲಾಗುವುದು ಎಂದರು.

ಸಿಇಒ ಸುನೀಲಕುಮಾರ ಪಾರಿಸಾಖೋತ ಮಾತನಾಡಿ, ಬ್ಯಾಂಕ್ 1,244 ಸದಸ್ಯರು, 7.21 ಕೋಟಿ ರೂ. ನಿಧಿ, 2.77 ಕೋಟಿ ರೂ. ಷೇರು ಬಂಡವಾಳ, 83.67 ಕೋಟಿ ರೂ. ಗುಂತಾವಣೆ, 136.55 ಕೋಟಿ ರೂ. ಠೇವು ಸಂಗ್ರಹಿಸಿದೆ. ವ್ಯಾಪಾರ, ಉದ್ಯೋಗ, ಸಾರಿಗೆ ಮಯತ್ತು ಹೈನುಗಾರಿಕೆಗಾಗಿ 50.45 ಕೋಟಿ ರೂ. ಸಾಲ ವಿತರಿಸಿದ್ದು, 1.67 ಕೋಟಿ ರೂ.ಲಾಭ ಗಳಿಸಿದೆ ಎಂದರು.

ಉಪಾಧ್ಯಕ್ಷ ಉದಯಕುಮಾರ ಪಾಟೀಲ, ನಿರ್ದೇಶಕರಾದ ರಜನಿಕಾಂತ ಚೌಗುಲೆ, ಬಾಬಾಸಾಬ ಖೋತ, ಅಶೋಕ ಪಾಟೀಲ, ಸತೀಶ ಪಾಟೀಲ, ಸಚಿನ ಪಾಟೀಲ, ಪ್ರಶಾಂತ ಪಾಟೀಲ, ರಾಶಿದ ಮುಜಾವರ, ಜಯಕುಮಾರ ಖೋತ, ದರ್ಶನ ಹಾಲಪ್ಪನ್ನವರ, ಅಶ್ವಿನಿ ಪಾಟೀಲ, ದಿವ್ಯಾಲಕ್ಷ್ಮೀ ಲಡಗೆ, ಅಜಿತ ಡೋಣವಾಡೆ, ಶ್ರೀಪಾಲ ಮುನ್ನೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net