ಚಳ್ಳಕೆರೆ ನಗರ ಅಭಿವೃದ್ಧಿಗೆ ಆದ್ಯತೆ: ನಗರಸಭಾ ಅಧ್ಯಕ್ಷೆ ಸುಮಕ್ಕ ಭರವಸೆ

CLK NAGARASABHE 20
Published on

ಚಳ್ಳಕೆರೆ: ಮೂವತ್ತೊಂದು ವಾರ್ಡ್‌ಗಳಲ್ಲಿ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನಗರಸಭಾ ನೂತನ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ ಭರವಸೆ ನೀಡಿದರು.

ನಗರದ 19ನೇ ವಾರ್ಡ್‌ನ ವಿಠಲ ನಗರದಲ್ಲಿ ಸೋಮವಾರ ನಗರೋತ್ಥಾನ ಯೋಜನೆಯಡಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ವಿಸ್ತಾರವಾಗಿ ಬೆಳೆಯುತ್ತಿರುವ ನಗರದಲ್ಲಿ ಸ್ವಚ್ಛತೆ ಮತ್ತು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ಕಳೆದ ವರ್ಷ ಕರೊನಾ ಸಮಸ್ಯೆಯಿಂದಾಗಿ ಕುಂಠಿತವಾಗಿರುವ ಜನೋಪಯೋಗಿ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ವಾರ್ಡ್ ಸದಸ್ಯೆ ಕವಿತಾ ವೀರೇಶ್, ಸದಸ್ಯ ಬಿ.ಟಿ. ರಮೇಶ್‌ಗೌಡ, ಮುಖಂಡ ಗಾಂಧಿನಗರ ಕೃಷ್ಣ, ಪೌರಾಯುಕ್ತ ಪಿ. ಪಾಲಯ್ಯ, ಇಂಜಿನಿಯರ್ ಲೋಕೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net