

ಯಾದಗಿರಿ: ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ಚಂಡ್ರಿಕಿ ಸೋಮವಾರ ಸ್ಥಳೀಯ ಶಾಸಕ ವೆಂಕಟರಡ್ಡಿ ಮುದ್ನಾಳ್ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು.
ಚಂಡ್ರಿಕಿ ಸೇರಿ ಪ್ರಾಧಿಕಾರದ ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಮುದ್ನಾಳ್, ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಜನಸೇವೆ ಮಾಡಬೇಕು. ಸಾರ್ವಜನಿಕರು ಕಚೇರಿಗೆ ಬಂದಾಗ ಅವರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ. ನಗರದ ಅಭಿವೃದ್ಧಿಯಲ್ಲಿ ಪ್ರಾಧಿಕಾರದ ಪಾತ್ರ ಅತ್ಯಂತ ಮಹತ್ವದ್ದಿರುತ್ತದೆ. ನಿಟ್ಟಿನಲ್ಲಿ ಕಾಯರ್ೋನ್ಮುಖರಾಗುವಂತೆ ಕಿವಿಮಾತು ಹೇಳಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಬಸವರಾಜ ಚಂಡ್ರಿಕಿ, ಶಾಸಕರು ಮತ್ತು ಪಕ್ಷದ ಹಿರಿಯರ ಆಶೀವರ್ಾದದಿಂದ ನನಗೆ ಈ ಅವಕಾಶ ದೊರೆತಿದೆ. ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಜನಸೇವೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ್, ಡಾ.ಸಿದ್ದಪ್ಪ ಹೊಟ್ಟಿ, ಖಂಡಪ್ಪ ದಾಸನ್, ಮೋಹನ ಬಾಬು, ಮಲ್ಲಣಗೌಡ ಹತ್ತಿಕುಣಿ, ಸಿದ್ದಣಗೌಡ ಕಾಡಂನೋರ್, ಮಹೇಶರಡ್ಡಿ ಮುದ್ನಾಳ್, ಭೀಮನಗೌಡ ಕ್ಯಾತನಾಳ, ನೂತನ ಸದಸ್ಯರಾದ ರುದ್ರಗೌಡ ಪಾಟೀಲ್, ಶಿವಕಾಂತಮ್ಮ ವಡ್ನಳ್ಳಿ, ಸುಭಾಷ್ ಮಾಳಿಕೇರಿ, ಮಂಜುನಾಥ ಜಡಿ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ವಿಲಾಸ ಪಾಟೀಲ್ ಇದ್ದರು.