ಬಂಗಾರಪೇಟೆಗೆ ನಗರಾಭಿವೃದ್ಧಿ ಪ್ರಾಧಿಕಾರ ಮಂಜೂರು

19 BPT 1 MLA
Published on

ಬಂಗಾರಪೇಟೆ: ಬಂಗಾರಪೇಟೆಗೆಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ, ನಗರ ಅಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿದ್ದು, 25 ವರ್ಷಗಳ ಕನಸು ನನಸಾಗಿಸಿದೆ. ಅಭಿವೃದ್ಧಿಗೆ 227 ಕೋಟಿ ರೂ.ಡಿಪಿಆರ್​ ಸಿದ್ಧಪಡಿಸಿ ಹಣ ಬಿಡುಗಡೆಗೆ ಸರ್ಕಾರಕ್ಕೆ ವರದಿ ಕೊಟ್ಟಿದ್ದು, ಸದ್ಯದಲ್ಲೇ ಡಿಪಿಆರ್​ಗೆ ಮಂಜೂರಾತಿ ದೊರಕಲಿದೆ ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.

ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕು ಕೇಂದ್ರವಾಗಿರುವ ಬಂಗಾರಪೇಟೆ ನಿವಾಸಿಗಳು ಬಡಾವಣೆ ನಿಮಾರ್ಣ, ಭೂ ಪರಿವರ್ತನೆ, ಮನೆ ನಿಮಾರ್ಣ ಪ್ಲ್ಯಾನ್​ಗಳಿಗೆ ಅನುಮೋದನೆ ಸೇರಿ ಇತರ ಕೆಲಸಗಳಿಗೆ ಕೆಜಿಎಫ್​ ಪ್ರಾಧಿಕಾರಕ್ಕೆ ಹೋಗಿ ಬರಬೇಕಾಗಿತ್ತು. ಇದರಿಂದ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಸರ್ಕಾರದ ಮೇಲೆ ಒತ್ತಡ ತಂದು ನಾಗರಿಕರ ಹಿತದೃಷ್ಟಿಯಿಂದ ಬಂಗಾರಪೇಟೆಗೆ ಹೊಸದಾಗಿ ನಗರ ಅಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿಸಲಾಗಿದೆ. ಹಳೇ ಪುರಸಭೆ ಕಟ್ಟಡದಲ್ಲಿ ಪ್ರಾಧಿಕಾರ ಕಚೇರಿ ಪ್ರಾರಂಭಿಸಲಾಗುವುದು ಎಂದರು.

ಕೋಲಾರ ಮುಖ್ಯ ರಸ್ತೆ ಅಗಲೀಕರಣ, ಬಂಗಾರಪೇಟೆ ಕೆರೆಗೆ ಫೆನ್ಸಿಂಗ್​, ವಿದ್ಯುತ್​ ದೀಪ ಅಳವಡಿಸಲಾಗುವುದು. ಬಂಗಾರಪೇಟೆಯಿಂದ ಕೆಜಿಎಫ್​, ಸೂಲಿಕುಂಟೆ, ಬೂದಿಕೋಟೆ , ಹರಟಿ ರಸ್ತೆಗಳನ್ನು 7 ತಿಂಗಳಲ್ಲಿ ಅಭಿವೃದ್ಧಿಗೊಳಿಸಲಾಗುವುದು. ರಂಗಮಂದಿರ, ಗುರುಭವನ, ಸ್ಟೇಡಿಯಂ ಈಗಾಗಲೇ ಕಾಮಗಾರಿ ಆರಂಭವಾಗಿ ಇನ್ನೇನು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ ಎಂದರು.

ಮಾಂಸಮಾರಾಟ ಮಳಿಗೆ ಪ್ರತ್ಯೇಕ

ನಗರದೆಲ್ಲೆಡೆಕೋಳಿ ಮತ್ತು ಮಾಂಸ ಮಾರಾಟ ಅಂಗಡಿಗಳಿದ್ದು, ಒಂದು ಕಡೆ ಮಾರಾಟ ಮಾಡಲು ಮಳಿಗೆಗಳ ನಿಮಾರ್ಣಕ್ಕೆ 4 ಕೋಟಿ ಮಂಜೂರು ಮಾಡಲಾಗಿದೆ. 50ಕ್ಕೂ ಹೆಚ್ಚು ಕೋಳಿ ಮತ್ತು ಮಾಂಸ ಮಾರಾಟ ಮಳಿಗೆಗಳನ್ನು ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.

ನೋಟಿಸ್​ ಜಾರಿ

ಸರ್ವೇ ನಂ.15ರಲ್ಲಿ ಸರ್ಕಾರಿ ಜಮೀನುಒತ್ತುವರಿ ಮತ್ತು ಬೋಗಸ್​ ದಾಖಲೆ ಸೃಷ್ಟಿಸಿದವರ

ಸಿಬ್ಬಂದಿಗೆ ಈಗಾಗಲೇ ತಹಸೀಲ್ದಾರ್​ ನೋಟಿಸ್​ ಜಾರಿ ಮಾಡಿದ್ದಾರೆ. ಕಾರಹಳ್ಳಿ ಸ.ನ.197 ರ ಸರ್ಕಾರಿ ಜಮೀನಿನಲ್ಲಿ ಎಲ್ಲ ಸಮುದಾಯಗಳಿಗೆ 10 ಗುಂಟೆ ಜಮೀನು ಮಂಜೂರು ಮಾಡಿಸಿದ್ದೇನೆ. ಅದಕ್ಕೆ ಸಮುದಾಯಗಳ ಹೆಸರು ಪಹಣಿಯಲ್ಲಿ ಬರುತ್ತಿದೆ. ಸದರಿ ಸಮುದಾಯ ಜಾಗಗಳಿಗೆ ಸ್ಕೆಚ್​ ನಂತೆ ಒತ್ತುವರಿ ಮಾಡಿರುವವರನ್ನು ತೆರುವುಗೊಳಿಸಿ ಸಮುದಾಯಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು.

16 ಖಡತಗಳಿಗೆ ಮಂಜೂರು

ಸುಮಾರು 20&-30 ವರ್ಷಗಳಿಂದ ಅನುಭವದಲ್ಲಿದ್ದು ಸಾಗುವಳಿ ಮಾಡುತ್ತಿರುವ 39 ಲಾನುಭವಿಗಳ ಪೈಕಿ 16 ಲಾನುಭವಿಗಳ ಕಡತಗಳನ್ನು ಬಗರ್​ಹುಕುಂ ಸಮಿತಿ ಸದಸ್ಯರ ಸಭೆಯಲ್ಲಿ ಮಂಜೂರು ಮಾಡಿಸಲಾಗಿದೆ. ಉಳಿದ ಲಾನುಭವಿಗಳ ಕಡತಗಳಲ್ಲಿ ಲೋಪಗಳು ಕಂಡು ಬಂದಿರುವುದರಿಂದ ವಾರದಲ್ಲಿ ಮಂಜೂರು ಮಾಡಿಸಲಾಗುವುದು. ಸಾಗುವಳಿ ಚೀಟಿ ಪಡೆದ ನಂತರ ಖಾತೆ ಮ್ಯುಟೇಷನ್​, ಹದ್ದುಬಸ್ತುಗಳಿಗೆ ಲಾನುಭವಿಗಳಿಗೆ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಕಂಪ್ಯೂಟರ್​ನಲ್ಲಿ ಫೀಡ್​ ಮಾಡಿ ಸರ್ವೇ ಮೋಜಿಣಿ ಮುಖಾಂತರ ಸರಿಪಡಿಸಿ ಲಾನುಭವಿಗೆ ರಿಜಿಸ್ಟ್ರರ್​ ಕಚೇರಿಯಲ್ಲಿ ಸಮಿತಿ ಮುಖಾಂತರ ನೋಂದಣಿ ಮಾಡಿಸಿಕೊಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಾಸಕ ನಾರಾಯಣಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net