ಅಳ್ನಾವರ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ: ಪ್ರಗತಿಪರ ಸಹಕಾರ ಗುಂಪಿಗೆ ಗೆಲುವು

Alnavar urban bank election
Published on

ಅಳ್ನಾವರ: ಪಟ್ಟಣದ ದಿ. ಅಳ್ನಾವರ ಅರ್ಬನ್ ಬ್ಯಾಂಕ್ 2024-2029ನೇ ಸಾಲಿನ ಆಡಳಿತ ಮಂಡಳಿಯ ಸಾಮಾನ್ಯ ಕ್ಷೇತ್ರದ 9 ಸ್ಥಾನಗಳಿಗೆ ಭಾನುವಾರ ಏರ್ಪಡಿಸಲಾಗಿದ್ದ ಚುನಾವಣೆಯಲ್ಲಿ ಪ್ರಗತಿಪರ ಸಹಕಾರ ಗುಂಪಿನ ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಈ ಹಿಂದಿನ ಆಡಳಿತ ಮಂಡಳಿಯ ನಿರ್ದೇಶಕರುಗಳು ಪ್ರಗತಿಪರ ಸಹಕಾರ ಗುಂಪು ರಚಿಸಿಕೊಂಡಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದ ಮೂವರು ಅಭ್ಯರ್ಥಿಗಳ ವಿರುದ್ಧ ಸಹಕಾರ ಗುಂಪಿನ ಅನಂತರಾಮ ವಿ. ಉಡುಪಿ, ಮಲ್ಲಿಕಾರ್ಜುನ ಬಿ. ತೇಗೂರ, ರಾಜು ಎ. ಅಷ್ಟೇಕರ, ಶಿವಲಿಂಗಪ್ಪ ಜಿ. ಜಕಾತಿ, ಮಲ್ಲಪ್ಪ ಆರ್. ಗಾಣಿಗೇರ, ರೂಪೇಶ ಎಂ. ಗುಂದಕಲ, ಪ್ರಶಾಂತ ಎಸ್. ಹೊಸಕೇರಿ, ಮಧು ಕೆ. ಬಡಸ್ಕರ, ಛಗನಲಾಲ ಕೆ. ಪೂಕಾರ ಗೆಲುವು ಸಾಧಿಸಿದರು ಎಂದು ಚುನಾವಣಾಧಿಕಾರಿ ಗಾಯತ್ರಿ ರಾಠೋಡ ತಿಳಿಸಿದರು.

ಮೀಸಲಾತಿಯ 6 ಕ್ಷೇತ್ರಕ್ಕೆ ಉದಯ ಎನ್. ಗಡಕರ, ಜಾವಿದ್ ಆರ್. ತೋಲಗಿ, ಸಂಧ್ಯಾ ಅಂಬಡಗಟ್ಟಿ, ವರ್ಷಾ ಬಿ. ತೇಗೂರ, ಫಕೀರಪ್ಪ ಎಸ್. ಮೇದಾರ, ನಾಗರಾಜ ಪಿ. ಹಂಜಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net