ಊರಮ್ಮದೇವಿ ಜಾತ್ರಾಮಹೋತ್ಸವ ಅದ್ದೂರಿ

6 hdlp 02
ಹೂವಿನಹಡಗಲಿ ತಾಲೂಕಿನ ಮುದೇನೂರು ಗ್ರಾಮದೇವತೆ ಊರಮ್ಮ ದೇವಿಯ ಮೆರವಣಿಗೆ ಮಂಗಳವಾರ ರಾತ್ರಿ ಅದ್ದೂರಿಯಾಗಿ ಜರುಗಿತು.
Published on

ಹೂವಿನಹಡಗಲಿ: ತಾಲೂಕಿನ ಮುದೇನೂರಿನಲ್ಲಿ ಗ್ರಾಮದೇವತೆ ಊರಮ್ಮ ದೇವಿಯ ಜಾತ್ರಾಮಹೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು. ಗ್ರಾಮದಾದ್ಯಂತ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

ಡ್ರಮ್‌ಸೆಟ್, ಮುದ್ದು ಸುಡುವುದು, ಹಲಗಿ, ಕಹಳೆ, ಶಹನಾಯಿ, ಡೊಳ್ಳು, ಇತರ ವಾದ್ಯಗಳು ಉತ್ಸವಕ್ಕೆ ಮೆರುಗು ತಂದವು. ದೇವಿಯ ಮೂರ್ತಿಯನ್ನು ಚೌತಿಮನೆೆ ಕಟ್ಟಿಯಲ್ಲಿ ಕುಳ್ಳಿರಿಸಿದ ನಂತರ ಗಟ್ಟಿಗಡಿಗಿ (ಕೇಲೋತ್ಸವ) ಒಂದೊತ್ತಿನವರ ವ್ರತಾಚರಣೆ ಸಂಪನ್ನ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಗಳು ಜರುಗಿದವು. ನಂತರ ಗ್ರಾಮಸ್ಥರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬುಧವಾರ ಬೆಳಗಿನಜಾವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹುಲುಸು (ಚರಗ) ಚೆಲ್ಲಿದರು. ಗುರುವಾರ ಸಂಜೆ ದೇವಿಯ ಹೂವಿನ ತೇರು ನಡೆಯಲಿದೆ. ನಂತರ ದೇವಿಯ ಮೂರ್ತಿಯ ಮೆರವಣಿಗೆ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಮೇ 13 ರಂದು ದೇವಿಗೆ ಉಡಿ ತುಂಬವ ಮೂಲಕ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net