ಯುಪಿಎಸ್ ಸಿ ಪರೀಕ್ಷೆ ಫಲಿತಾಂಶ; ಬೆಳಗಾವಿ ರೈತನ ಪುತ್ರನ ಸಾಧನೆ

IMG-20240112-WA0037.jpg
Published on


-ದೇಶಕ್ಕೆ‌186ನೇ ಶ್ರೇಯಾಂಕ ಪಡೆದ ಅಕ್ಷಯ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮೂಡಲಗಿ ತಾಲೂಕಿನ ಹೊಸಯರಗುದ್ರಿ ಗ್ರಾಮದ ರೈತನ ಪುತ್ರ ಅಕ್ಷಯ ಗಿರೀಶ ನಾಡಗೌಡ  ಕೇಂದ್ರ ಲೋಕಸೇವಾ ಆಯೋಗ (UPSC)ದ Geologists ಎಲ್ಲಾ ಪರಿಕ್ಷೆಗಳಲ್ಲಿ ಉತ್ತೀರ್ಣರಾಗಿ ದೇಶಕ್ಕೆ 186 ಶ್ರೆಯಾಂಕ ಪಡೆದಿದ್ದಾರೆ. ಶುಕ್ರವಾರ ಯುಪಿಎಸ್ ಫಲಿತಾಂಶ ಪ್ರಕಟವಾಗಿದೆ.
ಕೇಂದ್ರ ಸರ್ಕಾದ ಗಣಿಗಳ ಸಚಿವಾಲಯದ ಗಣಿಗಾರಿಕೆ ಅಧಿಕಾರಿ ಆಗಿದ್ದಾರೆ. (Geoscintist Or mining officer Group A (GEZZETED ) under ministery of mines) ಗೆ  ಕರ್ನಾಟಕ ದಿಂದ ಒಬ್ಬರೆ ಆಯ್ಕೆಯಾಗುವದರೊಂದಿಗೆ  ಕರುನಾಡಿಗೆ ಹೆಮ್ಮೆ ತಂದಿದ್ದಾರೆ. ಕೃಷಿ ಕುಟುಂಬದಿಂದ ಬೆಳೆದು ಬಂದಿರುವ ಅಕ್ಷಯ ನಾಡಗೌಡ ಎರಡನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಉತ್ತೀರ್ಣರಾಗಿದ್ದಾರೆ. ಕೃಷಿಕರಾಗಿರುವ ತಂದ ಗಿರೀಶ ನಾಡಗೌಡ ಆಸೆಯಂತೆ ಪುತ್ರನು ಉನ್ನತ ಹುದ್ದೆಗೇರಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net