ಉಪ್ಪುಂದದಲ್ಲಿ ಲಕ್ಷ್ಮೀನಾರಾಯಣ ಹೃದಯ ಹವನ

homa new
Published on

ಉಪ್ಪುಂದ: ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ಸಮಾರೋಪ ಪ್ರಯುಕ್ತ ಶುಕ್ರವಾರ ದೇವಳದ ಪರ್ಯಾಯ ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ಲಕ್ಷ್ಮೀನಾರಾಯಣ ಹೃದಯ ಹವನ, ಶ್ರೀರಾಮನಾಮ ತಾರಕ ಹವನ ಹಾಗೂ ರಾಮನಾಮ ಲಿಖಿತ ಜಪಾದಿಗಳು ವೈಭವವಾಗಿ ನಡೆಯಿತು.

ಮಧ್ಯಾಹ್ನ ಪೂರ್ಣಾಹುತಿ ಬಳಿಕ ಶ್ರೀ ಲಕ್ಷ್ಮೀವೆಂಕಟರಮಣ ದೇವರಿಗೆ ಸರ್ವಾಲಂಕೃತ ಸಹಿತ ವಿಶೇಷ ಹೂವಿನ ಪೂಜೆ ನಡೆಯಿತು. ಸಮಾಜದ ಸ್ತ್ರೀಯರು ಅಷ್ಟಲಕ್ಷ್ಮೀ ವೇಷಧಾರಿಗಳಾಗಿ ಪ್ರದರ್ಶನ ನೀಡಿದರು. ಸಾಯಂಕಾಲ ಕೋಟೇಶ್ವರ ಪಟ್ಟಾಭಿ ರಾಮಚಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು. ರಾತ್ರಿ ದೇವರಿಗೆ ಅಷ್ಟಾವಧಾನ ಸೇವೆ, ಮಹಾಪೂಜೆ ನಡೆಯಿತು. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಟ್ರಸ್ಟ್ ಹಾಗೂ ವರಮಹಾಲಕ್ಷ್ಮೀ ವ್ರತ ಸಮಿತಿ ಆಶ್ರಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಊರ-ಪರವೂರ ಜಿಎಸ್‌ಬಿ ಸಮಾಜದವರು ಭಾಗಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net