ಉಪ್ಪೂರಲ್ಲಿ ಅಪಾಯಕಾರಿ ಹೊಂಡ, ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ

uppoor
Published on

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಉಡುಪಿಯಿಂದ ಬ್ರಹ್ಮಾವರ ನಡುವಿನ ಉಪ್ಪೂರಲ್ಲಿ ರಸ್ತೆ ಮಧ್ಯೆ ಬೃಹತ್ ಹೊಂಡ ಸೃಷ್ಟಿಯಾಗಿದ್ದುಮ ವಾಹನ ಚಾಲಕರಿಗೆ ಅಪಾಯಕಾರಿಯಾಗಿದೆ. ಈ ಹೊಂಡದಲ್ಲಿ ನೀರು ತುಂಬಿ ವೇಗವಾಗಿ ಬರುವ ದ್ವಿಚಕ್ರ ವಾಹನ ಸವಾರರಿಗೆ ಗೊತ್ತಾಗದೆ ಅಪಘಾತವಾಗಿದೆ.

ಆ ಬಳಿಕ ಗುಂಡಿ ಬಳಿ ಬ್ಯಾರಿಕೇಡ್ ಅಳವಡಿಸಿದ್ದು, ಇದರಲ್ಲಿ ರಿಫ್ಲೆಕ್ಟರ್ ಕೂಡ ಇಲ್ಲದೆ ರಾತ್ರಿ ಹೊತ್ತು ಪ್ರಯಾಣ ಮಾಡುವವರಿಗೆ ತೀರಾ ತೊಂದರೆಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೇವಲ ಕಾಮಗಾರಿ ಮಾಡಿ ಟೋಲ್ ವಸೂಲಿ ಮಾಡುತ್ತಿದೆ. ಇಂಥ ನಿರ್ಲಕ್ಷ್ಯಗಳಿಂದ ಪ್ರಾಣಹಾನಿ ಸಂಭವಿಸುವ ಮೊದಲು ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಎಲ್ಲ ಗುಂಡಿಗಳನ್ನು ತಕ್ಷಣ ಮುಚ್ಚುವ ಕೆಲಸ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net