ಕರ್ತವ್ಯ ಪಥಕ್ಕೆ ಪವಿತ್ರ ಮಣ್ಣು ಸಂಗ್ರಹ

15-upbr- nanna mannu
Published on

ಉಪ್ಪಿನಬೆಟಗೇರಿ: ದೇಶದ ರಕ್ಷಣೆ ಕಾರ್ಯದಲ್ಲಿ ಹುತಾತ್ಮರಾದ ಸೈನಿಕರ ಸವಿನೆನಪಿಗಾಗಿ ದೆಹಲಿಯಲ್ಲಿ ಕರ್ತವ್ಯ ಪಥ ಉದ್ಯಾನ ನಿರ್ಮಿಸಲಾಗುತ್ತದೆ. ಇದಕ್ಕೆ ಪ್ರತಿ ಹಳ್ಳಿಯಿಂದ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿಮೌಳಿ ಕುಲಕರ್ಣಿ ಹೇಳಿದರು.
ಗ್ರಾಮದ ಶ್ರೀ ವಿರೂಪಾಕ್ಷೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ನಮ್ಮ ಮಣ್ಣು- ನಮ್ಮದೇಶ ಅಭಿಯಾನದಲ್ಲಿ ಅವರು ಮಾತನಾಡಿದರು.
ಮಹಾಶಕ್ತಿ ಕೇಂದ್ರದ ಸಂಘಟನಾ ಕಾರ್ಯಕರ್ತರು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದಲ್ಲಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದರು.
ನಿಜನಗೌಡ ಪಾಟೀಲ, ಪ್ರದೀಪ ಮುಳ್ಳೂರ, ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೊಳಮಠ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಹೇಶ ತೊಗಲಂಗಿ, ಮಂಡಲ ಅಧ್ಯಕ್ಷ ರುದ್ರಪ್ಪ ಅರಿವಾಳ, ಗ್ರಾಪಂ ಸದಸ್ಯ ಮಡಿವಾಳಪ್ಪ ಶಿಂದೋಗಿ, ಶಿವಾನಂದ ದೇಶನೂರ, ಕೃಷ್ಣಾ ಬುದ್ನಿ, ಸೋಮಲಿಂಗ ಅಂಗಡಿ, ಶಿವಾನಂದ ಹಟ್ಟಿ, ಜ್ಯೋತೆಪ್ಪ ಜಾಧವ, ಪರಮೇಶ್ವರ ಮಾದರ, ರುದ್ರಪ್ಪ ಕೆಂಪೂರ, ಅಶೋಕ ಹುಡೇದ, ಸೋಮು ಗೋಡೆಕಟ್ಟಿ, ರುದ್ರಪ್ಪ ಮಸೂತಿ, ಮಲ್ಲಯ್ಯ ಮಠಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net