ಅನಾರೋಗ್ಯದಿಂದ ಉಪ್ಪಿನಂಗಡಿ ಠಾಣೆ ಹೆಡ್‌ಕಾನ್‌ಸ್ಟೆಬಲ್ ಸಾವು

Krishnappa
Published on

ಉಪ್ಪಿನಂಗಡಿ: ಠಾಣಾ ಹೆಡ್‌ಕಾನ್‌ಸ್ಟೆಬಲ್ ಜೆ.ಕೃಷ್ಣಪ್ಪ ನಾಯ್ಕ್(46) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಮೂಲತಃ ಮಾಣಿ ಸಮೀಪದ ನೇರಳಕಟ್ಟೆ ನಿವಾಸಿಯಾಗಿದ್ದ ಕೃಷ್ಣಪ್ಪ ಅವರು ಪೊಲೀಸ್ ಇಲಾಖೆಯಲ್ಲಿ 26 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಉಪ್ಪಿನಂಗಡಿ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೆಬಲ್ ಆಗಿ ಸುಮಾರು 6 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಂಗಳೂರಿನ ಟ್ರಿಪಲ್ ಮರ್ಡರ್ ಪ್ರಕರಣದ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವಲ್ಲಿ ಕೌಶಲ ಮೆರೆದಿದ್ದರು. ಮಂಗಳೂರು ದಕ್ಷಿಣ, ಪುಂಜಾಲಕಟ್ಟೆ, ಪುತ್ತೂರು ನಗರ ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ, ಲಾಟರಿ ನಿಷೇಧ ದಳ, ಅಪರಾಧ ವಿಭಾಗ, ಗುಪ್ತ ಮಾಹಿತಿ ವಿಭಾಗ, ಹಿರಿಯ ಅಧಿಕಾರಿಗಳ ಅಂಗರಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಅನಾರೋಗ್ಯದಿಂದ 2022ರಿಂದ ರಜೆಯಲ್ಲಿದ್ದರು. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net