

ಕೆ.ಆರ್.ಸಾಗರ: ಇಲ್ಲಿನ ರೈಲ್ವೇ ನಿಲ್ದಾಣದ ಬಳಿ ಮಂಗಳವಾರದಿಂದ ನಡೆಯುತ್ತಿರುವ ಉಪ್ಪರಿಕೆ ಶ್ರೀ ಬಸವೇಶ್ವರ ದನಗಳ ಜಾತ್ರೆಯು ಆಕರ್ಷಣೆಯಾಗಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಂದ ನೂರಾರು ಜೋಡಿ ಎತ್ತುಗಳು ಜಾತ್ರೆಯಲ್ಲಿ ಭಾಗವಹಿಸಿವೆ. ದನಗಗಳಿಗೆ ಯಾವುದೇ ತೊಂದರೆಯಾಗದಂತೆ ಮಾಲೀಕರೇ ಶಾಮಿಯಾನ ಹಾಕಿದ್ದಾರೆ. ಇನ್ನು ಕೆಲವರು ದನಗಳು ಮಲಗಲು ಭತ್ತದ ಹೊಟ್ಟನ್ನು ನೆಲಕ್ಕೆ ಹಾಕಿದ್ದಾರೆ. ಜಾತ್ರೆಯಲ್ಲಿ ಕಡಲೆಪುರಿ ಸೇರಿದಂತೆ ತಿಂಡಿ, ತಿನಿಸುಗಳ ವ್ಯಾಪಾರ ಕೂಡ ಜೋರಾಗಿದೆ. ದೇವರ ದರ್ಶನಕ್ಕೆ ನಿತ್ಯ ನೂರಾರು ಭಕ್ತರು ಭೇಟಿ ನೀಡಿ, ನಂತರ ದನಗಳ ಜಾತ್ರೆ ವೀಕ್ಷಣೆ ಮಾಡುತ್ತಿದ್ದಾರೆ. ಜತೆಗೆ ದನಗಳ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.