

ಕೆ.ಆರ್.ಸಾಗರ : ಇಲ್ಲಿನ ರೈಲು ನಿಲ್ದಾಣಕ್ಕೆ ಸಮೀಪದ ಉಪ್ಪರಿಕೆ ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರೆ ಮೈದಾನದಲ್ಲಿ ದನಗಳ ಜಾತ್ರೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೆಗೌಡ ಸೋಮವಾರ ಬಸವೇಶ್ವರ ದೇವರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಜಾತ್ರೆಗೆ ಕಟ್ಟಿದ್ದ ರಾಸುಗಳನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ಯಂತ್ರೋಪಕರಣಗಳನ್ನು ಕೃಷಿಯಲ್ಲಿ ಬಳಸುತ್ತಿರುವುದರಿಂದ ರೈತರು ರಾಸು ಸಾಕುವುದನ್ನು ಕಡಿಮೆ ಮಾಡಿದ್ದಾರೆ. ಆದರೆ ಹಿಂದಿನಿಂದಲೂ ಬೇಸಾಯದಲ್ಲಿ ದನಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಒತ್ತುವರಿ ವಿರುದ್ಧ ಕ್ರಮ: ಜಾತ್ರೆ ಮೈದಾನದ ಜಾಗವನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತವರಿ ಮಾಡುತ್ತಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಲವು ವರ್ಷಗಳಿಂದ ಜಾತ್ರೆ ನಡೆಯುತ್ತಿದ್ದ ಜಾಗ ಇದಾಗಿದ್ದು, ಎಂತಹ ಪ್ರಭಾವ ಬೀರಿದರೂ ಜಾವನ್ನು ಒತ್ತುವರಿಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉಪ್ಪರಿಕೆ ಶ್ರೀ ಬಸವೇಶ್ವರ ಜಾತ್ರೆ ಸಮಿತಿ ಅಧ್ಯಕ್ಷ ವಿಷಕಂಠೇಗೌಡ, ಕಾರ್ಯದರ್ಶಿ ಎಂ.ಬಿ.ಕುಮಾರ್, ಖಚಾಂಚಿ ಮಲ್ಲೇಶ್, ಜಂಟಿ ಕಾರ್ಯದರ್ಶಿ ವಿನೋದ್ ಕುಮಾರ್, ಗೌರವ ಅಧ್ಯಕ್ಷ ಹಾಲೇಗೌಡ, ಹುಲಿಕೆರೆ ಗ್ರಾಪಂ ಅಧ್ಯಕ್ಷೆ ಶ್ವೇತಾ ಕೃಷ್ಣ, ಆನಂದೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಕೆ.ಆರ್.ಸಾಗರ ಗ್ರಾಪಂ ಸದಸ್ಯ ದೇವರಾಜು, ಕೆ.ಆರ್.ಸಾಗರ ಪಿಎಚ್‌ಸಿಯ ವೈದ್ಯೆ ಡಾ. ಪ್ರಪುಲ್ಲಾ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಜಿ.ಸುರೇಶ್, ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿ.ಎಸೈ ಬಸವರಾಜು, ರಾಘವೇಂದ್ರ, ರವಿ, ಚಂದ್ರಶೇಖರ್ ಮತ್ತಿತರರಿದ್ದರು.
ಪೋಟ : 15-01ಞಡಿ1
ಉಪ್ಪರಿಕೆ ಶ್ರೀ ಬಸವೇಶ್ವರ ದೇವರ ಅಲಂಕೃತ ಪ್ರತಿಮೆ,