ವೈದ್ಯಕೀಯ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲ: ಸ್ತ್ರೀರೋಗ ತಜ್ಞ ಡಾ.ಯೋಗೇಂದ್ರಕುಮಾರ್ ಕಿವಿಮಾತು

1 (1)
Published on

ಮಂಡ್ಯ: ಮೂಢನಂಬಿಕೆಗಳಿಂದ ವೈದ್ಯಕೀಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಮಿಮ್ಸ್‌ನ ಸ್ತ್ರೀರೋಗ ತಜ್ಞ ಡಾ. ಯೋಗೇಂದ್ರಕುಮಾರ್ ಸಲಹೆ ನೀಡಿದರು.

ತಾಲೂಕಿನ ಉಪ್ಪರಕನಹಳ್ಳಿ ಗ್ರಾಮದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಮತೆಯ ಮಡಿಲು ವತಿಯಿಂದ ಆಯೋಜಿಸಿದ್ದ ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಜನತೆ ಮೌಢ್ಯತೆಯನ್ನು ಅಳಿಸಿ ಹಾಕಿ ವಿಜ್ಞಾನದ ಔಷಧದ ಕಡೆಗೆ ಗಮನಹರಿಸಿ. ಇದರೊಂದಿಗೆ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತೀರಾ ಅವಶ್ಯಕವಾಗಿದೆ ಎಂದು ಹೇಳಿದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಅವ್ಯವಸ್ಥೆಗೊಳ್ಳುತ್ತಿರುವ ಗ್ರಾಮ ಜೀವನವನ್ನು ಸುವ್ಯವಸ್ಥೆಗೊಳಿಸಲು ಎನ್‌ಎಸ್‌ಎಸ್ ಸಹಕಾರಿ. ಶಿಬಿರಾಧಿಕಾರಿಗಳು ಗ್ರಾಮದಲ್ಲಿ ನಡೆಯುವ ಕಾರ್ಯ ಯೋಜನೆಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿಕೊಂಡು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ರೂಪಿಸಬೇಕಾಗಿರುವುದು ಅವಶ್ಯಕ ಎಂದರು.

ಗ್ರಾ.ಪಂ ಸದಸ್ಯ ನಾಗೇಶ್, ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಮಾತನಾಡಿದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಎಚ್.ಟಿ.ಆನಂದ್, ಶಿಬಿರಾಧಿಕಾರಿ ಲೋಕೇಶ್, ಹುಲ್ಲೇರಪ್ಪ, ನೇತ್ರಾವತಿ, ತಂಡದ ನಾಯಕಿ ಸೌಮ್ಯ ಇತರರಿದ್ದರು. ಶಿಬಿರದಲ್ಲಿ ನೂರಾರು ಮಹಿಳೆಯರು ತಪಾಸಣೆ ಮಾಡಿಕೊಂಡು ಉಚಿತವಾಗಿ ಔಷಧೋಪಚಾರವನ್ನು ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net