ಶಿಕ್ಷಣದ ಉನ್ನತೀಕರಣ ಅದಾನಿ ಸಂಸ್ಥೆಯ ಆದ್ಯತೆ

adani
Published on

ಪಡುಬಿದ್ರಿ: ಶಿಕ್ಷಣದ ಉನ್ನತೀಕರಣ ಅದಾನಿ ಫೌಂಡೇಶನ್‌ನ ಪ್ರಮುಖ ಆದ್ಯತೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಉತ್ತೇಜನ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವಿಕೆ ಹಾಗೂ ಸಮುದಾಯ ಸಬಲೀಕರಣ ಬೆಂಬಲಿಸಲು ಅದಾನಿ ಫೌಂಡೇಶನ್ ಬದ್ಧ ಎಂದು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹೇಳಿದರು.

ಅದಾನಿ ಸಮೂಹದ ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆ (ಸಿಎಸ್‌ಆರ್) ನಿರ್ವಹಿಸುವ ಅದಾನಿ ಫೌಂಡೇಶನ್ ಮೂಲಕ ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿಗೆ 25 ಲಕ್ಷ ರೂ.ಅನುದಾನದ ಚೆಕ್ ಶುಕ್ರವಾರ ಹಸ್ತಾಂತರಿಸಿ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಮಾತನಾಡಿ, ಅದಾನಿ ಸಮೂಹದ ಸಿಎಸ್‌ಆರ್ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ವರದಾನವಾಗಿವೆ. ಸಂಸ್ಥೆಯು ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಶ್ಲಾಘಿಸಿದರು.  ಪ್ರಾಂಶುಪಾಲ ಡಾ.ರಾಧಾಕೃಷ್ಣ ಅದಾನಿ ಸಮೂಹಕ್ಕೆ ಅಭಿನಂದಿಸಿದರು. ಯುಪಿಸಿಎಲ್ ಕಂಪನಿಯ ಎಜಿಎಂ ರವಿ ಆರ್.ಜೇರೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net