ಅರ್ಹ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸಿ

ದೇವದುರ್ಗದಲ್ಲಿ ತಾಪಂ ಇಒ ಬಸವರಾಜ ಹಟ್ಟಿಗೆ ರಾಜ್ಯ ಗ್ರಾಪಂ ನೌಕರರ ಸಂಘ ಮನವಿ ಸಲ್ಲಿಸಿತು. ಗೌರವಾಧ್ಯಕ್ಷ ಗಿರಿಯಪ್ಪ ಪೂಜಾರಿ, ತಾಲೂಕು ಅಧ್ಯಕ್ಷ ಪಂಚಯ್ಯ ಕರಿಗಾರ, ಪ್ರಮುಖರಾದ ಪಾಂಡುರಂಗ ನಾಯಕ, ಕಾಶಿಲಿಂಗ, ಸಿದ್ದರೆಡ್ಡಿ, ಬಂಡೆಪ್ಪ ಇತರರಿದ್ದರು.
ದೇವದುರ್ಗದಲ್ಲಿ ತಾಪಂ ಇಒ ಬಸವರಾಜ ಹಟ್ಟಿಗೆ ರಾಜ್ಯ ಗ್ರಾಪಂ ನೌಕರರ ಸಂಘ ಮನವಿ ಸಲ್ಲಿಸಿತು. ಗೌರವಾಧ್ಯಕ್ಷ ಗಿರಿಯಪ್ಪ ಪೂಜಾರಿ, ತಾಲೂಕು ಅಧ್ಯಕ್ಷ ಪಂಚಯ್ಯ ಕರಿಗಾರ, ಪ್ರಮುಖರಾದ ಪಾಂಡುರಂಗ ನಾಯಕ, ಕಾಶಿಲಿಂಗ, ಸಿದ್ದರೆಡ್ಡಿ, ಬಂಡೆಪ್ಪ ಇತರರಿದ್ದರು.
Published on

ದೇವದುರ್ಗ: ಅರ್ಹತೆ ಆಧಾರದ ಮೇಲೆ ವಿವಿಧ ಗ್ರಾಪಂಗಳನ್ನು ಮೇಲ್ದರ್ಜೆಗೆ ಏರಿಸುವುದು, ನೌಕರರಿಗೆ ಸೇವಾ ಭದ್ರತೆ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿಯಲ್ಲಿ ರಾಜ್ಯ ಗ್ರಾಪಂ ನೌಕರರ ಸಂಘದಿಂದ ಮಂಗಳವಾರ ಇಒ ಬಸವರಾಜ ಹಟ್ಟಿಗೆ ಮನವಿ ಸಲ್ಲಿಸಲಾಯಿತು.

ಒಂದು ವರ್ಷದ ಹಿಂದೆ ಗ್ರಾಪಂ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದಾಗ ಸರ್ಕಾರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ, ವರ್ಷ ಕಳೆದರೂ ನೌಕರರ 19 ಬೇಡಿಗಳಲ್ಲಿ ಒಂದೂ ಈಡೇರಿಸಿಲ್ಲ. ಈವರೆಗೆ ಮೂರು ಹಂತದ ಹೋರಾಟ ನಡೆಸಿ ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಸ್ಪಂದಿಸದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಅರ್ಹ ಗ್ರಾಪಂಗಳನ್ನು ಗ್ರೇಡ್-2ರಿಂದ ಗ್ರೇಡ್-1ಗೆ ಹಾಗೂ ಪಪಂಗೆ ಮೇಲ್ದರ್ಜೆಗೇರಿಸಬೇಕು. ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು. ಸೇವಾ ಹಿರಿತನದ ಆಧಾರದಲ್ಲಿ ಭತ್ಯೆ ಹೆಚ್ಚಿಸಬೇಕು. ಪ್ರತಿ ಗ್ರಾಪಂಗೆ ಲೆಕ್ಕ ಸಹಾಯಕರನ್ನು ನೇಮಿಸಬೇಕು. ಎಲ್ಲ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗೌರವಾಧ್ಯಕ್ಷ ಗಿರಿಯಪ್ಪ ಪೂಜಾರಿ, ತಾಲೂಕು ಅಧ್ಯಕ್ಷ ಪಂಚಯ್ಯ ಕರಿಗಾರ, ಪ್ರಮುಖರಾದ ಪಾಂಡುರಂಗ ನಾಯಕ, ಕಾಶಿಲಿಂಗ, ಸಿದ್ದರೆಡ್ಡಿ, ದತ್ತಾತ್ರೇಯ, ಬಂಡೆಪ್ಪ, ಶಿವಪ್ಪ, ಹನುಮಯ್ಯ, ಅಯ್ಯಪ್ಪ, ಶಿವಣ್ಣ, ಮೌನೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net