ಯು.ಐ. ಪ್ರಚಾರಕ್ಕೆ ಉಪೇಂದ್ರ ಹುಬ್ಬಳ್ಳಿಗೆ

New UI New
Published on

ಹುಬ್ಬಳ್ಳಿ : ಕನ್ನಡ ಚಲನಚಿತ್ರ ‘ಯು.ಐ’ ಪ್ರಚಾರಕ್ಕಾಗಿ ನಟ, ನಿರ್ದೇಶಕ ಉಪೇಂದ್ರ ಹಾಗೂ ನಿರ್ವಪಕ ಕೆ.ಪಿ. ಶ್ರೀಕಾಂತ ಅವರು ಡಿ. 4ರಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ರಾಜಕುಮಾರ ಅಭಿಮಾನಿಗಳ ಸಂಘ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳ ಸಂಘದ ವಿಜಯಕುಮಾರ ಅಪ್ಪಾಜಿ, ಅಂದು ಬೆಳಗ್ಗೆ 10 ಗಂಟೆಗೆ ವಿದ್ಯಾನಗರದ ಬಿವಿಬಿ ಕಾಲೇಜಿನಿಂದ ಶಿರೂರ ಪಾರ್ಕ್​ನ ತೋಳನಕೆರೆವರೆಗೆ ಉಪೇಂದ್ರ ಹಾಗೂ ಕೆ.ಪಿ. ಶ್ರೀಕಾಂತ ಅವರು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಚಲನಚಿತ್ರದ ಪ್ರಚಾರ ನಡೆಸಲಿದ್ದಾರೆ ಎಂದರು.

ಮಾದಕ ವ್ಯಸನದ ಬಗ್ಗೆ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಉಪೇಂದ್ರ ಅವರು ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಜಗದೀಶ ರಿತ್ತಿ, ರಾಜು ಜೋಸೆಫ್, ಶಿವರಾಜ ಗೌರಿ, ಸುನೀಲ ಮರಾಠೆ, ಧರ್ಮರಾಜ ಕಠಾರೆ ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net