

ಉಪ್ಪಳ: ಕೇರಳ ಪ್ರದೇಶ್ ಶಾಲಾ ಶಿಕ್ಷಕರ ಸಂಘ(ಕೆ.ಪಿ.ಎಸ್.ಟಿ.ಎ) ರಾಜ್ಯ ಮಹಾಸಭೆಯ ಅಂಗವಾಗಿ ಮಂಜೇಶ್ವರ ಉಪಜಿಲ್ಲಾ ಸಮಾವೇಶ, ಉಪ್ಪಳ ಮುಳಿಂಜ ಜಿಎಲ್‌ಪಿ ಶಾಲೆಯಲ್ಲಿ ಭಾನುವಾರ ನಡೆಯಿತು.
ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಅಧ್ಯಕ್ಷ ಇಸ್ಮಾಯಿಲ್ ಮೀಯಪದವು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಲ್ಪಸಂಖ್ಯಾತ ಸೆಲ್ ಸಂಚಾಲಕಿ ಜಲಜಾಕ್ಷಿ ಮುಖ್ಯ ಅತಿಥಿಯಾಗಿದ್ದರು.
ರೆವಿನ್ಯೂ ಜಿಲ್ಲಾ ಜತೆಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಜಿಲ್ಲಾ ಜತೆ ಕಾರ್ಯದರ್ಶಿ ಜನಾರ್ದನನ್ ಕೆ.ವಿ, ಶಿಕ್ಷಣ ಜಿಲ್ಲಾ ಅಧ್ಯಕ್ಷ ವಿಮಲ್ ಅಡಿಯೋಡಿ, ಮೂಡಂಬೈಲು ಶಾಲೆಯ ಮುಖ್ಯಶಿಕ್ಷಕ ಜಾರ್ಜ್ ಕ್ರಾಸ್ತ, ಮುಳಿಂಜ ಶಾಲೆಯ ಮುಖ್ಯಶಿಕ್ಷಕಿ ಚಿತ್ರಾವತಿ ಎಂ. ಚಿಗುರುಪಾದೆ, ಸೌಮ್ಯ ಪಿ.ಕುಳೂರು, ಕಣ್ವತೀರ್ಥ ಜಿ.ಎಲ್.ಪಿ. ಶಾಲೆ ಮುಖ್ಯಶಿಕ್ಷಕ ಪದ್ಮನಾಭ, ಅಬ್ಸ, ಅಬೂಬಕ್ಕರ್ ಕುರುಡಪದವು ಮೊದಲಾದವರು ಮಾತನಾಡಿದರು.
ಉಪಜಿಲ್ಲಾ ಕಾರ್ಯದರ್ಶಿ ಒ.ಎಂ.ರಶೀದ್ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಸೀತ ಕುಮಾರಿ ವಂದಿಸಿದರು. ನಿವೃತ್ತಿಯಾಗಲಿರುವ ಮುಖ್ಯಶಿಕ್ಷಕ ಪದ್ಮನಾಭ ಅವರನ್ನು ಗೌರವಿಸಲಾಯಿತು. ಹೊಸತಾಗಿ ಸೇವೆಗೆ ಸೇರಿದ ಉದ್ಯೋಗಾರ್ಥಿಗಳನ್ನು ಗೌರವಿಸಲಾಯಿತು.ನೂತನ ಶೈಕ್ಷಣಿಕ ವರ್ಷದ ಪದಾಧಿಕಾರಿಗಳಾಗಿ ಇಸ್ಮಾಯಿಲ್ ಮೀಯಪದವು(ಅಧ್ಯಕ್ಷ,) ಒ.ಎಂ.ರಶೀದ್(ಕಾರ್ಯದರ್ಶಿ), ಪ್ರಸೀತ ಕುಮಾರಿ(ಕೋಶಾಧಿಕಾರಿ) ಆಯ್ಕೆಗೂಂಡರು.